PM Modi: ಎಲ್ಲಾ ಮಹಿಳೆಯರಿಗೂ ಮೋದಿ ಗಂಡನಾಗಲು ಸಾಧ್ಯವೇ? ಆಪ್ ನಾಯಕನ ವಿವಾದಾತ್ಮಕ ಹೇಳಿಕೆ

PM Modi:ಎಎಪಿ ನಾಯಕ ಹಾಗೂ ರಾಜ್ಯ ಸಭಾ ಸಂಸದರಾದಂತಹ ಸಂಜಯ್ ಸಿಂಗ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಘರ್ ಘರ್ ಸಿಂಧೂರ್ ಒಂದು ಗಿಮಿಕ್ ಎಂದು ಹೇಳಿದ್ದಾರೆ.

ತಮ್ಮ X ಖಾತೆಯಲ್ಲಿ ವಾಗ್ದಾಳಿ ನಡೆಸಿರುವ ಇವರು ‘ಒಂದು ರಾಷ್ಟ್ರ ಒಂದು ಚುನಾವಣೆ’ ‘ ಒಂದು ರಾಷ್ಟ್ರ ಒಬ್ಬ ನಾಯಕ’ ಎನ್ನುವಂತೆ ಘರ್ ಘರ್ ಸಿಂಧೂರ್ ‘ಒಂದು ರಾಷ್ಟ್ರ ಒಬ್ಬ ಪತಿ’ ಅನ್ನು ಮಾಡುವಂತೆ ತೋರುತ್ತಿದೆ ಎಂದಿದ್ದಾರೆ.
ಎಲ್ಲಾ ಮಹಿಳೆಯರು ಪ್ರಧಾನಿ ಮೋದಿಯನ್ನು ಪತಿಯೆಂದು ಸ್ವೀಕರಿಸಬೇಕೆಂದು ಬಿಜೆಪಿ ನಿರೀಕ್ಷೆ ಮಾಡುತ್ತಿದೆಯೇ? ಇದು ಮಹಿಳೆಯರಿಗೆ ಮಾಡುತ್ತಿರುವ ಅವಮಾನ ಎಂದು ಸಂಜಯ್ ಸಿಂಗ್ ಕಿಡಿಕಾರಿದ್ದಾರೆ. ಬಿಜೆಪಿ ಹಿಂದೂ ಧರ್ಮವನ್ನು ತನ್ನ ದುರುಪಯೋಗಕ್ಕಾಗಿ ಬಳಸುತ್ತಿದೆ ಎಂದಿದ್ದಾರೆ.
Comments are closed.