Bihar: ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಆಂಬ್ಯುಲೆನ್ಸ್ ನಲ್ಲೇ ಪ್ರಾಣ ಬಿಟ್ಟ ಅತ್ಯಾಚಾರ ಸಂತ್ರಸ್ತೆ

Bihar: ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಆಂಬ್ಯುಲೆನ್ಸ್ ನಲ್ಲೇ ಕಾದು ಕುಳಿತ ಅತ್ಯಾಚಾರ ಸಂತ್ರಸ್ತೆ ಸಾವನ್ನಪ್ಪಿರುವ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಸಂತ್ರಸ್ತೆಯನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಬೆಡ್ ಇಲ್ಲದ ಕಾರಣ ಆಂಬ್ಯುಲೆನ್ಸ್ನಲ್ಲಿ ಗಂಟೆಗಟ್ಟಲೆ ಕಾಯುವಂತೆ ಮಾಡಲಾಗಿತ್ತು, ಸಾಕಷ್ಟು ಪ್ರಯತ್ನದ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಗಾಯ ಗಂಭೀರವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತ ಪಟ್ಟಿದ್ದಾಳೆ. ಇನ್ನೂ ಈ ಆರೋಪವನ್ನು ಆಸ್ಪತ್ರೆ ಸಂಪೂರ್ಣವಾಗಿ ತಳ್ಳಿ ಹಾಕಿದ್ದು, ಮಾಹಿತಿ ಸಿಕ್ಕ ತಕ್ಷಣವೇ ಚಿಕಿತ್ಸೆ ನೀಡಿದ್ದೇವೆ ಎಂದಿದ್ದಾರೆ.
ಬಾಲಕಿಯ ಚಿಕ್ಕಪ್ಪ ನೀಡಿದ್ದ ಮಾಹಿತಿ ಪ್ರಕಾರ, ಶನಿವಾರ ಬೇರೆ ಆಸ್ಪತ್ರೆಯಿಂದ ಪಿಎಂಸಿಎಚ್ಗೆ ತಲುಪಿದಾಗ, ತುರ್ತು ವಿಭಾಗದ ಸಿಬ್ಬಂದಿ ಬೆಡ್ ಇಲ್ಲ ಎಂದು ಹೇಳಿದ್ದು, ಹಲವಾರು ವಾರ್ಡ್ಗಳಿಗೆ ನಮ್ಮನ್ನು ಅಲೆಯುವಂತೆ ಮಾಡಿರುತ್ತಾರೆ, ಕೊನೆಗೆ ಎಲ್ಲಿಯೂ ಬೆಡ್ ಸಿಗದಿದ್ದಾಗ ಕೆಲವು ರಾಜಕಾರಣಿಗಳ ಮಧ್ಯಸ್ಥಿಕೆಯ ಮೇರೆಗೆ ಸಂಜೆ 5 ಗಂಟೆಗೆ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದರು.
ಹಾಗೂ ಅತ್ಯಾಚಾರ ಆದ ದಿನವೇ ಆರೋಪಿಯನ್ನು ಬಂಧಿಸಿದ್ದು, ಬಾಲಕಿ ಆಂಬ್ಯುಲೆನ್ಸ್ನಲ್ಲಿದ್ದಾಗ ಬಿಹಾರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್ ನೇತೃತ್ವದಲ್ಲಿ ಡಜನ್ಗಟ್ಟಲೆ ಕಾರ್ಮಿಕರು ಪಿಎಂಸಿಎಚ್ ತಲುಪಿ ಈ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ ನಡೆಸಿರುತ್ತಾರೆ.
Comments are closed.