Mobile Torchlight: ನಾಲ್ಕು ಮಹಿಳೆಯರಿಗೆ ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಹೆರಿಗೆ ಮಾಡಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ

Share the Article

Uttar Pradesh: ಉತ್ತರ ಪ್ರದೇಶದ ಬಲ್ಲಿಯಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಟಾರ್ಚ್ ಬೆಳಕಿನಲ್ಲಿ ನಾಲ್ವರು ಮಹಿಳೆಯರಿಗೆ ಹೆರಿಗೆ ಮಾಡಿಸಿರುವ ಘಟನೆಯೊಂದು ನಡೆದಿದೆ.

ಆರೋಗ್ಯ ಕೇಂದ್ರದಲ್ಲಿ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡ ನಂತರ ವಿದ್ಯುತ್ ಸರಿ ಮಾಡಿರುವುದಿಲ್ಲ ಹಾಗೂ ಅಲ್ಲಿನ ಜೇನರೇಟರ್ ಕೂಡ ಹಾಳಾಗಿದ್ದು, ಈ ಪ್ರಕರಣದ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ. ಈ ಹಿಂದೆ ಇದೇ ಭಾಗದ ಆಸ್ಪತ್ರಯೊಂದರಲ್ಲಿ ಮಹಿಳೆಯೊಬ್ಬಳು ನೆಲದ ಮೇಲೆ ಮಲಗಿಕೊಂಡು ಮಗುವಿಗೆ ಜನ್ಮ ನೀಡಿದ ವಿಡಿಯೋ ವೈರಲ್ ಆಗಿತ್ತು ಅದಾದ ನಂತರ ಈ ಆರೋಪ ಕೇಳಿ ಬಂದಿದೆ.

ಇದರ ಕುರಿತಾಗಿ ತನಿಖೆ ನಡೆಸಲು 3 ಜನರ ಸಮಿತಿಯನ್ನು ರಚಿಸಲಾಗಿದೆ. ಸೋಮವಾರ ರಾತ್ರಿ ಬೇರೊರ್ಬರಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಎಂದು ವರದಿ ಮಾಡಲಾಗಿದೆ.

Comments are closed.