Tulsi: ತುಳಸಿ ಗಿಡ ಚೆನ್ನಾಗಿ ಬೆಳೆಯಲು ಇಲ್ಲಿದೆ ಸುಲಭ ಪರಿಹಾರ

Share the Article

Tulsi: ಸಾಮಾನ್ಯವಾಗಿ ಪ್ರತಿಯೊಂದು ಭಾರತ ಮನೆಗಳಲ್ಲಿಯೂ ತುಳಸಿ ಗಿಡಗಳು ಇರುತ್ತವೆ. ಆದರೆ ಕೆಲವು ಬಾರಿ ಅವುಗಳ ಬೆಳವಣಿಗೆ ಕಮ್ಮಿ ಪ್ರಮಾಣದಲ್ಲಿ ಆಗುತ್ತದೆ. ತುಳಸಿ ಗಿಡಗಳು ಉತ್ತಮವಾಗಿ ಬೆಳವಣಿಗೆಯಾಗಲು ಇಲ್ಲಿದೆ ಸುಲಭವಾದ ಪರಿಹಾರಗಳು.

ತರಕಾರಿ ಹಣ್ಣಿನ ಸಿಪ್ಪೆಗಳು, ಕಾಫಿ ಪುಡಿ ಹಾಗೂ ಅಡುಗೆ ಮನೆಯಲ್ಲಿ ಉಳಿದ ಕಸದಂತ ಪದಾರ್ಥಗಳಿಂದ ಉಂಟಾದ ಗೊಬ್ಬರ ಹಾಕುವುದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಹಾಗೂ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಷಿಯಂ ಹಾಗೂ ಪೋಷಕಾಂಶಗಳು ಹೇರಳವಾಗಿದ್ದು ಇದನ್ನು ಗೊಬ್ಬರವಾಗಿ ಬಳಸುವುದರಿಂದ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ.

ಇನ್ನೂ ವಿಶೇಷವಾಗಿ ಅಕ್ಕಿ ತೊಳೆದ ನೀರನ್ನು ಹಾಕುವುದರಿಂದ ಬೇರುಗಳು ಗಟ್ಟಿಯಾಗಲು ಸಹಕಾರಿಯಾಗಿದೆ, ಬಳಸಿದ ಚಹಾ ಪುಡಿಯನ್ನು ಹಾಕುವುದರಿಂದ ಅತೀವ ಪೋಷಕಾಂಶಗಳು ದೊರೆಯುತ್ತವೆ. ಇನ್ನೂ ಮೊಟ್ಟೆಯ ಸಿಪ್ಪೆಯಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿದ್ದು, ಇದನ್ನು ಹಾಕುವುದರಿಂದ ಸಸ್ಯದ ಗೋಡೆಗಳು ಬಲಶಾಲಿಯಾಗುತ್ತವೆ. ಹಾಗೂ ಮೆಗ್ನೇಶಿಯಂ ಸಲ್ಫೆಟ್ ನಿಂದ ತಯಾರಾದ ಉಪ್ಪಿನ ಬಳಕೆಯಿಂದ ಪರಿಮಳ ಹೆಚ್ಚಾಗುತ್ತದೆ ಮತ್ತು ಬೆಳವಣಿಗೆ ಹೆಚ್ಚಿಸಲು ಇದು ನೆರವಾಗುತ್ತದೆ.

ಹಾಗೂ ಇದರ ಬೆಳವಣಿಗೆಗೆ ಕನಿಷ್ಠ 5 ರಿಂದ 6 ಗಂಟೆ ಸೂರ್ಯನ ಬೆಳಕು ಅಗತ್ಯವಿದ್ದು, ಸಗಣಿ ಗೊಬ್ಬರವು ಪೋಷಕಾಂಶವನ್ನು ಹೆಚ್ಚಾಗಿ ನೀಡುತ್ತದೆ. ಮತ್ತು ಅತಿಯಾಗಿ ನೀರು ಹಾಕದೆ ಇರುವುದು ಕೂಡ ಸಸ್ಯದ ಬೆಳವಣಿಗೆಗೆ ಸಹಕಾರಿ.

Comments are closed.