Mango leaves: ನಿಮ್ಮನೆಯಲ್ಲೂ ದೇವರ ಕೋಣೆಲಿ ಮಾವಿನ ಎಲೆ ಇಟ್ಟಿದ್ದೀರಾ? ಇಲ್ಲಿದೆ ನೋಡಿ ಹಿಂದಿನ ಕಾರಣ

Share the Article

Mango leaves: ಸಾಮಾನ್ಯವಾಗಿ ನಮ್ಮೆಲ್ಲರ ಮನೆಯ ದೇವರುಕೋಣೆಗಳಲ್ಲಿ ನಾವು ಮಾವಿನ ಎಲೆಗಳನ್ನು ನೋಡುತ್ತೇವೆ ಇದರ ಹಿಂದೆ ಹಲವಾರು ಕಾರಣಗಳಿವೆ.

ಕಲಶಕ್ಕೆ ಇಡುವುದಾಗಿರಬಹುದು ಹಾಗೂ ತೋರಣಗಳನ್ನು ಕಟ್ಟುವುದು ಹೀಗೆ ಅನೇಕ ಕಡೆ ಮನೆಗಳಲ್ಲಿ ಮಾವಿನ ಎಲೆಗಳನ್ನು ಬಳಸುತ್ತೇವೆ. ಈ ಮಾವಿನ ಗಿಡವನ್ನು ಅಥವಾ ಮರವನ್ನು ಪೂಜಿಸುವುದರಿಂದ ದೈವಿಕ ಆಶೀರ್ವಾದ ದೊರೆಯುತ್ತದೆ ಎಂಬುದು ಒಂದು ಕಡೆಯಾದರೆ ಇನ್ನು ಇದರ ಬಳಕೆಯಿಂದಾಗಿ ಅನೇಕ ಉಪಯೋಗಳನ್ನು ನಾವು ಕಂಡುಕೊಳ್ಳಬಹುದಾಗಿದೆ.

ಈ ಎಲೆಗಳನ್ನು ದೇವರ ಕೋಣೆಯಲ್ಲಿ ಇಡುವುದರಿಂದ ಮನೆಯ ಮೂಲೆ ಮೂಲೆಯಲ್ಲೂ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಇದು ಮನೆಯಲ್ಲಿನ ನಕಾರಾತ್ಮಕತೆಯನ್ನು ತೆಗೆದುಹಾಕಿ ಶಾಂತಿ ಮತ್ತು ಪಾವಿತ್ರತೆಯು ಮನೆಯಲ್ಲಿ ಉಳಿಯುವಂತೆ ಮಾಡುತ್ತದೆ. ಮತ್ತು ಮನೆಗೆ ದೈವಿಕ ಶಕ್ತಿಯನ್ನು ಆಕರ್ಷಿಸುವ ಜೊತೆಗೆ ಮನೆಗೆ ದೈವಿಕ ಶಕ್ತಿಯ ಆಕರ್ಷಣೆ ಹೆಚ್ಚಾದಂತೆ ಕುಟುಂಬವು ಆಧ್ಯಾತ್ಮಿಕವಾಗಿ ಅಭಿವೃದ್ಧಿಯನ್ನು ಸಾಧಿಸುತ್ತದೆ. ಇದು ದೇವರು ಮನೆಯ ಮೇಲೆ ಆಶೀರ್ವಾದವನ್ನು ಉಳಿಸುವಂತೆ ಮಾಡುವಲ್ಲಿ ಸಹಕಾರಿಯಾಗಿದೆ.

ಇನ್ನು ಈ ಮಾವಿನ ಎಲೆಗಳು ವಿಷ್ಣು ಹಾಗೂ ಲಕ್ಷ್ಮಿ ಗೆ ಇಷ್ಟವಾದುದರಿಂದ ಆ ದೇವರ ಆಶೀರ್ವಾದವು ದೊರೆಯುತ್ತದೆ ಹಾಗೂ ಮನೆಗೆ ಸಂತೋಷ, ಸಂಪತ್ತು ಮತ್ತು ಸಮೃದ್ಧಿ ಆಕರ್ಷಿತವಾಗುತ್ತದೆ. ಹಾಗೂ ಈ ಎಲೆಗಳಿಗೆ ಗ್ರಹ ದೋಷಗಳನ್ನು ನಿವಾರಣೆ ಮಾಡುವ ಶಕ್ತಿ ಕೂಡ ಇರುವಂತದ್ದು. ಇದರಿಂದಾಗಿ ಕೌಟುಂಬಿಕ ಕಲಹಗಗಳು, ಮನಸ್ಥಾಪಗಳು ದೂರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಹಾಗೂ ಮಾನಸಿಕವಾಗಿ ನೆಮ್ಮದಿ ದೊರೆಯುತ್ತದೆ.
ಹಾಗೂ ಈ ಎಲೆಗಳನ್ನು ಇಡುವ ಮುನ್ನ ಅವುಗಳನ್ನು ತೊಳೆದು, ಅರಸಿನ ಕುಂಕುಮ ಹಚ್ಚಿ ಇಡಬೇಕು. ಹಾಗೂ ಕಲಶದ ಮೇಲೆ ಅಥವಾ ಕೆಂಪು ಬಣ್ಣದ ಬಟ್ಟೆಯ ಮೇಲೆ ಕೂಡ ಇಡಬಹುದು

Comments are closed.