Chikkodi: ಬಾಲಕಿ ಮೇಲೆ ಸ್ವಾಮೀಜಿ ಅತ್ಯಾಚಾರ ಪ್ರಕರಣ – ಇಡೀ ಮಠವನ್ನೇ ಧ್ವಂಸಗೊಳಿಸಿದ ತಾಲೂಕು ಆಡಳಿತ!!

Share the Article

Chikkodi: ಮೇಖಳಿ ಗ್ರಾಮದ ರಾಮ ಮಂದಿರ ಮಠದ ಲೋಕೇಶ್ವರ ಎಂಬ ಕಪಟಿ ಸ್ವಾಮೀಜಿಯು ತನ್ನ ಮಠದಲ್ಲಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ರಾಜ್ಯದ್ಯಂತ ಸಂಚಲನ ಸೃಷ್ಟಿಸಿತ್ತು. ಬಳಿಕ ಸ್ವಾಮೀಜಿಯನ್ನು ಅರೆಸ್ಟ್ ಕೂಡ ಮಾಡಲಾಗಿತ್ತು. ಇದೀಗ ತಾಲೂಕಾಡಳಿತವು ಈ ಕಪಟಿ ಸ್ವಾಮೀಜಿಯ ಮಠವನ್ನು ಸಂಪೂರ್ಣ ಧ್ವಂಸಗೊಳಿಸಿದೆ.

ಹೌದು, ಮಠದ ಸ್ವಾಮೀಜಿಗೆ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಜೈಲು ಶಿಕ್ಷೆಯಾಗುತ್ತಿದ್ದಂತೆ, ರಾಯಬಾಗ ತಹಶೀಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಮೇಖಳಿ ಗ್ರಾಮದ ಸರ್ವೇ ನಂ. 225ರಲ್ಲಿ 8 ಎಕರೆ ಸರ್ಕಾರಿ ಜಮೀನನ್ನು ಲೋಕೇಶ್ವರ ಸ್ವಾಮೀಜಿ ಅತಿಕ್ರಮಣ ಮಾಡಿ, 8 ವರ್ಷಗಳ ಹಿಂದೆ ಈ ಮಠವನ್ನು ಕಟ್ಟಿದ್ದರು. ಆದರೆ, ಈ ಜಮೀನು ಗೋಮಾಳ ಜಮೀನಾಗಿದ್ದು, ಇದರಲ್ಲಿ ಯಾವುದೇ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಅನಧಿಕೃತ ನಿರ್ಮಾಣದ ಜೊತೆಗೆ, ಸ್ವಾಮೀಜಿಯ ದುಷ್ಕೃತ್ಯದ ಆರೋಪವು ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಕಾರಣವಾಯಿತು.

ರಾಯಬಾಗ ತಾಲೂಕಾಡಳಿತವು ಮೂರು ಜೆಸಿಬಿಗಳನ್ನು ಬಳಸಿ, ಮಠದ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿತು. ಈ ಕಾರ್ಯಾಚರಣೆಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ನಡೆಸಲಾಗಿದ್ದು, ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರವೂ ಇದಕ್ಕೆ ದೊರೆತಿತು. ಕಾರ್ಯಾಚರಣೆಯ ಸಂದರ್ಭದಲ್ಲಿ, ಮಠದ ಒಳಗೆ ತಲವಾರು, ಕೊಡಾಲಿ ಮತ್ತು ಜಂಬಿಯಾದಂತಹ ಹಲವು ಆಯುಧಗಳು ಸಿಕ್ಕಿವೆ.

Comments are closed.