Kamal Hassan: ನಟ‌ ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಬಿಡಲ್ಲ – ಕನ್ನಡ ಪರ ಹೋರಾಟಗಾರರಿಂದ ಪ್ರತಿಭಟನೆ

Share the Article

Kamal Hassan: ತಮಿಳಿನಿಂದ ಕನ್ನಡ ಹುಟ್ಟಿದೆ ಅನ್ನೋ ನಟ‌ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಅಲ್ಲದೆ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು ಅನ್ನೋ ವಿಚಾರವಾಗಿ ತಾನು ಕ್ಷಮೆ ಕೇಳಲ್ಲ ಎಂದು ಉದ್ಧಟತನ ಮೆರೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಕನ್ನಡ ಪರ ಹೋರಾಟಗಾರರು ಕಮಲ ಹಾಸನ್ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು, ಕರವೇ ಶಿವರಾಮೇಗೌಡ ಬಣದಿಂದ ಪ್ರತಿಭಟನೆ ನಡಸಲಾಗಿದ್ದು, ಕಮಲ್ ಹಾಸನ್ಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯ್ತು. ಏನೇ ಆದ್ರೂ ಕಮಲ್ ಹಾಸನ ಸಿನಿಮಾ ಬಿಡುಗಡೆಗೆ ಬಿಡಲ್ಲವೆಂದು ಪಟ್ಟು ಹಿಡಿದಿದ್ದಾರೆ ಕನ್ನಡ ಪರ ಹೋರಾಟಗಾರರು.

ಕ್ಷಮೆ ಕೇಳಿದರೆ ಶಾಂತಿ,ಇಲ್ಲವಾದ್ರೆ ಕ್ರಾಂತಿ ಎಂದು ಕಮಲ್ ಹಾಸನ್ ವಿರುದ್ಧ ಕರವೇ ರಾಜ್ಯಧ್ಯಕ್ಷ ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಫೋಟೋಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಫೋಟೋಗೆ ಚಪ್ಪಲಿಯಲ್ಲಿ ಹೊಡೆದು ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

Comments are closed.