ವಿಶ್ವದ ಮೊದಲ ವೀರ್ಯಾಣು ರೇಸ್‌! ಹೇಗಿತ್ತು ಗೊತ್ತಾ ಸ್ಪರ್ಧೆ, ಗೆದ್ದವರು ಯಾರು?

Share the Article

ಲಾಸ್ ಏಂಜಲೀಸ್: ವೀರ್ಯಾಣುಗಳು ಚಲನಶೀಲವಾದವುಗಳು. ಅವು ಹುಟ್ಟುತ್ತಲೇ ಇನ್ನೊಂದು ಹುಟ್ಟಿಸಲು ಸ್ಪರ್ಧೆಗೆ ಬೀಳುತ್ತವೆ. ಸ್ಪರ್ಧೆ ಎಂಬುದು ಅದರ ಸ್ವಭಾವ. ಖುಷಿಯನ್ನು ಹಂಚುತ್ತಾ ಒಮ್ಮೆ ಚಿಮ್ಮಿದ ವೀರ್ಯದಲ್ಲಿ ಲಕ್ಷಾಂತರ ವೀರ್ಯಾಣುಗಳಿರುತ್ತವೆ. (World’s first sperm race) ಅದರಲ್ಲಿ ತೀರಾ ಚುರುಕಿನ, ವೇಗವಾದ ಈಜುಗಾರ ಮಾತ್ರವೇ ಉಳಿದೆಲ್ಲವುಗಳಿಗಂತಲೂ ಮುಂದೆ ನುಗ್ಗಿ, ಧಾವಿಸಿ ಹೋಗಿ, ಎದುರಿಗೆ ಸಿಗುವ ಅಡೆತಡೆಗಳನ್ನು ಬದಿಗೆ ಸರಿಸಿಕೊಂಡು ಮುನ್ನುಗ್ಗಬಲ್ಲ. ಹಾಗೆ ಬಿರುಸು ವೇಗಿ ಒಬ್ಬನು ಮಾತ್ರವೇ ತನಗಾಗಿ ಅಲಂಕರಿಸಿಕೊಂಡು, ಕೆನ್ನೆ ಉಬ್ಬಿಸಿಕೊಂಡು ಬಿಮ್ಮಿನಿಂದ ಕಾದು ಕೂತಿರುವ ಅಂಡವನ್ನು ಕೂಡಿಕೊಳ್ಳಬಲ್ಲ. ಆಗ ಉತ್ಪತ್ತಿಯಾಗುತ್ತದೆ ಒಂದು ಹೊಸ ಜೀವ!

ವೀರ್ಯಾಣು ರೇಸ್ ಎಂಬ ವಿಚಿತ್ರ ಸ್ಪರ್ಧೆ!

ನಾವು ಕೂಡ ಹಾಗೆಯೇ ಹುಟ್ಟಿದ್ದೇವೆ. ನಾವೇನೂ ಸಾಮಾನ್ಯರಲ್ಲ. ಲಕ್ಷಾಂತರ ಚುರುಕಿನ ವೇಗದ ಓಟಗಾರರನ್ನ ಹಿಂದಿಕ್ಕಿ ಓಡಿ ಗೆದ್ದವರು ನಾವು. ಹಾಗಾಗಿ ನಮ್ಮ ಈ ಜೀವ ಹುಟ್ಟಿದೆ. ಒಬ್ಬನ ವೀರ್ಯಾಣುವಿನಲ್ಲೇ ಇಷ್ಟೊಂದು ಸ್ಪರ್ಧೆ ಪೈಪೋಟಿ ಇರಬೇಕಾದರೆ, ಭೂಮಿಯ ಮೇಲಿರುವ ಕೋಟ್ಯಂತರ ಪುರುಷರ ವೀರ್ಯಾಣುಗಳ ನಡುವೆಯೂ ಸ್ಪರ್ಧೆ ಇರಬಹುದಲ್ಲವೇ? ಸ್ಪರ್ಧೆ ಇದ್ದಾಗಲೇ ಯಾವುದೇ ಜೀವಿಯು, ಜೀವ ಕಣವು ಭೂಮಿಯ ಮೇಲೆ ಬದುಕುಳಿಯಲು ಸಾಧ್ಯ. ಆದರೆ ಎಷ್ಟರಮಟ್ಟಿಗೆ ಸ್ಪರ್ಧೆ ಇದೆ ಅನ್ನೋದನ್ನು ಕಣ್ಣಾರೆ ನೋಡಲು ವೀರ್ಯಾಣುಗಳಿಗೆ ಲೈವ್ ಆದ ಸ್ಪರ್ಧೆಯೊಂದನ್ನು ಇತ್ತೀಚೆಗೆ ಇಡಲಾಗಿತ್ತು.

ಇಂಥದೊಂದು ತಮಾಷೆಯ, ವೀರ್ಯಾಣುಗಳಿಗಾಗಿಯೇ ನಡೆಸಲಾದ ಒಂದು ಸ್ಪರ್ಧೆಯು ಇತ್ತೀಚೆಗೆ ಲಾಸ್‌ ಏಂಜಲೀಸ್‌ನಲ್ಲಿ ನಡೆದಿದೆ. ಅದು ವಿಶ್ವದ ಮೊದಲ ವೀರ್ಯಾಣು ರೇಸ್! ಸ್ಪರ್ಮ್ ರೇಸಿಂಗ್ ಎಂಬ ಹೊಸ ಸ್ಟಾರ್ಟಪ್‌ ಈ ಸ್ಪರ್ಧೆಯನ್ನು ನಡೆಸಿತು. ಇದು ವಿಶ್ವದ ಮೊದಲ ಲೈವ್ ವೀರ್ಯಾಣು ಓಟವಾಗಿದ್ದು, ಉದ್ಘಾಟನಾ ಹಣಾಹಣಿ ಕಳೆದ ಏಪ್ರಿಲ್ 25ರಂದು ನಡೆಯಿತು. ಎಲ್ಲ ರೇಸ್‌ಗಳಲ್ಲಿ ಇರುವಂತೆ ಇಲ್ಲೂ ಕಾಮೆಂಟರಿ ಇತ್ತು. ಲೈವ್‌ ಸ್ಟ್ರೀಮಿಂಗ್‌ – ಎಲ್ಲವೂ ಇತ್ತು. ಲೈವ್‌ ಸ್ಟ್ರೀಮಿಂಗ್‌ ಅಂದರೆ ಏನೇನೋ ಊಹಿಸಿಕೊಂಡು ಛೀ ಅನ್ನಬೇಡಿ. ಲೈವ್ ಆಗಿ ವೀರ್ಯದ ಓಟವನ್ನು ಸ್ಟ್ರೀಮ್ ಮಾಡಲಾಯಿತು.

ವೀರ್ಯದ ಮೇಲೆ ಬಾಜಿ!

ಆಟ ಓಟ ಇರುವಾಗ ಬೆಟ್‌ ಕಟ್ಟುವಿಕೆ ಒಂದು ಇಲ್ಲದೆ ಹೋದ್ರೆ ಹೇಗೆ? ಹಾಗಾಗಿ ವೀರ್ಯದ ಮೇಲೆ ಜನ ಬೆಟ್ ಕಟ್ಟಿ ಕೂತರು. ರೇಸಿನಲ್ಲಿ ಕ್ಷಣಕ್ಷಣಕ್ಕೂ ಸೂಕ್ಷ್ಮಾಣು ವೀರ್ಯಾಣುಗಳು ಅಂಡಾಣುವನ್ನು ಹುಡುಕಿಕೊಂಡು ಸಾಗುವ ಲೈವ್ ವಿಡಿಯೋವನ್ನು ದೊಡ್ಡ ಪರದೆಯ ಮೇಲೆ ಅಂದು ಪ್ರದರ್ಶಿಸಲಾಗಿತ್ತು.

ವೀಕ್ಷಕರಾಗಿ ಬಂದ ಪಡ್ಡೆ ಹುಡುಗಿಯರು, ಎಗರಿ ಎಗರಿ ಓಡಿದ ವೀರ್ಯಾಣುಗಳು!

ಅಂದು ಅಲ್ಲಿ ಎರಡು ವೀರ್ಯಾಣು ಸ್ಯಾಂಪಲ್‌ಗಳನ್ನು ಸ್ತ್ರೀಯ ಗರ್ಭನಾಳದ ಮಾದರಿಯ ಟ್ಯೂಬ್‌ಗಳಲ್ಲಿ ರೇಸ್‌ಗೆ ಬಿಡಲಾಯಿತು. ಇದನ್ನು ಸೂಕ್ಷ್ಮದರ್ಶಕಗಳ ಮೂಲಕ ವೀಕ್ಷಿಸಲಾಯಿತು. ಮತ್ತು ಅದರ ಲೈವ್‌ ಅನ್ನು ದೊಡ್ಡದಾಗಿ ಕಮೆಂಟರಿ ಸಹಿತ ಪರದೆಯಲ್ಲಿ ಪ್ರದರ್ಶಿಸಲಾಯಿತು. ಅಲ್ಲಿ ಸೇರಿದ್ದ ಸಾವಿರಾರು ವೀಕ್ಷಕರು ಉಭಯ ವೀರ್ಯಾಣುಗಳ ಪರ- ವಿರೋಧ ಪ್ರೋತ್ಸಾಹಿಸಿ ಬೊಬ್ಬಿರಿದರು. ಯಾವುದೇ ರನ್ನಿಂಗ್‌ ಮ್ಯಾರಥಾನ್‌ಗಿಂತಲೂ ಈ ಸ್ಪರ್ಧೆ ರೋಚಕವಾಗಿತ್ತು. ವೀಕ್ಷಕರಾಗಿ ಪಡ್ಡೆ ಹುಡುಗಿಯರೂ ಕುಲುಕುತ್ತಾ ಅಲ್ಲಿ ಸೇರಿದ್ದರಿಂದ ಆಟದ ಕಣ ಕಳೆಗಟ್ಟಿತ್ತು, ವೀರ್ಯಾಣುಗಳು ಇನ್ನಷ್ಟು ಉತ್ಸಾಹದಿಂದ ಎಗರಿ ಬಿದ್ದು ಓಡಿದ್ದವು!

ಈ ಸ್ಪರ್ಧೆ ಅಷ್ಟೊಂದು ಗಮನ ಸೆಳೆಯಲು ಕೂಡಾ ಕಾರಣಗಳಿವೆ. ಯಾಕೆಂದರೆ ಇಲ್ಲಿ ಒಂದು ವಿಷಯ ಸ್ಪರ್ಧೆಯ ಥ್ರಿಲ್‌ ಜತೆಗೆ ಪುರುಷತ್ವದ ಪ್ರಶ್ನೆಯೂ ಇತ್ತಲ್ಲ! ಯಾರ ಪುರುಷತ್ವ ಹೆಚ್ಚು ಗಡುಸು, ಯಾರದ್ದು ಅತ್ಯಂತ ಪ್ರಬಲ ಎಂಬ ಪ್ರಶ್ನೆಯೂ ಈ ಸ್ಪರ್ಧೆಯಲ್ಲಿ ಇತ್ಯರ್ಥವಾಗಬೇಕಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು ಇಪ್ಪತ್ತರಿಂದ ಮೂವತ್ತರ ಒಳಗಿನ ಯುವಕರ ಯೌವನದ ವೀರ್ಯಗಳು. ಮೂವತ್ತರ ನಂತರ ಪುರುಷರ ವೀರ್ಯಾಣುಗಳ ಸ್ಪೀಡು ಇಳಿಯುತ್ತದೆ. ಆದ್ದರಿಂದ ಈ ವಯಸ್ಸಿನವರ ವೀರ್ಯ ಸ್ಪರ್ಧೆಯಲ್ಲಿ ಇದ್ದರೆ ಹಿಂದೆ ಬೀಳುತ್ತದೆ ಎಂಬುದು ಈಗಾಗಲೇ ವೈದ್ಯ ಜಗತ್ತಿಗೆ ಗೊತ್ತಿದೆ.

ಈ ಸ್ಪರ್ಧೆಯ ಆಯೋಜಕರು 10 ದಶಲಕ್ಷ ಡಾಲರ್‌ಗಿಂತಲೂ ಹೆಚ್ಚಿನ ನಿಧಿ ಸಂಗ್ರಹಿಸಿ ಈ ಆಟ ಆಡಿಸಿದ್ದಾರೆ. ಮನರಂಜನೆ, ಮಜಾ ತಮಾಷೆಯ ಜೊತೆ ಜೊತೆಗೇ ಒಂದು ಗಂಭೀರ ವೈಜ್ಞಾನಿಕ ಅಂಶವನ್ನು ಸಾರುವುದು ಈ ಸ್ಪರ್ಮ್ ರೇಸಿನ ಉದ್ದೇಶ. ಪುರುಷ ಸಂತಾನೋತ್ಪತ್ತಿ ಆರೋಗ್ಯ, ಲೈಫ್‌ಸ್ಟೈಲ್‌ ಬದಲಾವಣೆಗಳಿಂದಾಗಿ ಪುರುಷರ ಫರ್ಟಿಲಿಟಿ ಸಾಮರ್ಥ್ಯ ಕುಂಠಿತ ಆಗುತ್ತಿರೋದು ಇವತ್ತಿನ ಜಾಗತಿಕ ಸಮಸ್ಥೆ. ಇದರ ಬಗ್ಗೆ ಜಾಗೃತಿ ಈ ವಿಶೇಷ ಸ್ಪರ್ಧೆಯ ಉದ್ದೇಶವಾಗಿತ್ತು.

*ಸ್ಪರ್ಮ್ ರೇಸಿಂಗ್ ಹೆಸರಿನ ಸ್ಟಾರ್ಟ್‌ಅಪ್ ಈ ವಿಚಿತ್ರ ಸ್ಪರ್ಧೆಯ ಆಯೋಜಕ.

*ಪ್ರತಿಯೊಂದೂ ಕೇವಲ 0.05 ಮಿಲಿಮೀಟರ್ ಅಳತೆಯ ವೀರ್ಯವನ್ನು – ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯ ರೀತಿಯ 20-ಸೆ.ಮೀ. ಸೂಕ್ಷ್ಮ ಟ್ಯೂಬ್‌ಗಳಲ್ಲಿ ಹರಿಬಿಡಲಾಯಿತು.

*ಸ್ಪರ್ಧೆ ರೋಚಕ. ವೀರ್ಯದ ಪ್ರತಿ ಚಲನೆ, ಓಟ ತುರುಸಿನ ಸ್ಪರ್ಧೆ ತಳ್ಳುವಿಕೆ ಮತ್ತು ಉತ್ಸಾಹವನ್ನು ಹೈ ರೆಸಲ್ಯೂಶನ್ ಕ್ಯಾಮೆರಾಗಳು ಸೆರೆಹಿಡಿದು ತೋರಿಸಿದವು.

*ಆಕ್ಷನ್ ಜತೆಗೆ ಕಮೆಂಟರಿ, ಅಂಕಿಅಂಶಗಳು, ಸ್ಕೋರ್ ಬೋರ್ಡ್‌ಗಳು, ಚೀಯರ್ ಗರ್ಲ್ ಗಳು – ಒಟ್ಟಾರೆ ಸ್ಪರ್ಧೆ ಯಾವುದೇ ನಿಜವಾದ ಕ್ರೀಡಾಕೂಟದಂತಿತ್ತು. ಕೊನೆಯಲ್ಲಿ ಪತ್ರಿಕಾಗೋಷ್ಠಿಯಿತ್ತು.

ಈ ಓಟವು 8 ಇಂಚು ಉದ್ದದ ರೇಸ್‌ಟ್ರಾಕ್‌ನಲ್ಲಿ ನಡೆಯಿತು. ಇಬ್ಬರು ಯುವ ವಿದ್ಯಾರ್ಥಿಗಳಿಂದ ತೆಗೆದ ಮಾದರಿಗಳನ್ನು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಲಾಯಿತು. 20 ವರ್ಷದ ಟ್ರಿಸ್ಟಾನ್ ಮಿಲ್ಕರ್’ನ ವೀರ್ಯವು ಭರ್ಜರಿಯಾಗಿ ಓಡಿ ಆತನನ್ನು ಗೆಲ್ಲಿಸಿದರೆ, 19 ವರ್ಷದ ಆಶರ್ ಪ್ರೊಗರ್ ಸೋಲಬೇಕಾಯ್ತು. ವೀರ್ಯದಂತಹ ದ್ರವವನ್ನು ಚೆಲ್ಲಿ ಬಿಟ್ಟು ಆತನ ಸೋಲನ್ನು ಸಾoಕೆಂತಿಕವಾಗಿ, ತಮಾಷೆಯಾಗಿ ತೋರಿಸಲಾಯಿತು.

ಇಂತಹಾ ಸ್ಪರ್ಧೆಗಳು ಇನ್ನು ಮುಂದೆಯೂ ನಡೆಯಲಿವೆಯಂತೆ. ಮುಂದಿನ ಬಾರಿ ಇದರಲ್ಲಿ ಸೆಲೆಬ್ರಿಟಿಗಳು ಕೂಡಾ ಭಾಗವಹಿಸಲಿದ್ದಾರಂತೆ. ಈಗಾಗಲೇ ಸ್ಪರ್ಮ್ ದಾನ ಶೂರ, ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಭಾಗಿ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಆತನ ಗೆಳೆಯ ಪವರ್ ಫುಲ್ ಟ್ರಂಪ್ ಕೂಡಾ ಮಹಾನ್ ರಸಿಕ ಮತ್ತು ಸ್ಪರ್ಧಾ ಗುಣ ಉಳ್ಳವರು. ಅವರಿಬ್ಬರೂ ಬಂದು ಒಂದಷ್ಟು ವೀರ್ಯ ಚೆಲ್ಲಿ ಕೊಟ್ಟರೆ, ಸ್ಪರ್ಧೆ ಇನ್ನಷ್ಟು ಕಳೆಗಟ್ಟುವುದರಲ್ಲಿ ಯಾವುದೇ ಅನುಮಾನ ಇಲ್ಲ. ಸಾರ್ವಜನಿಕರು ಕೂಡಾ ಒಂದು ಟ್ರೈ ಮಾಡಬಹುದು. ಯಾರಿಗೆ ಗೊತ್ತು, ಯಾರ ಬಳಿ ಗುಪ್ತವಾಗಿ ಅಡಗಿಕೊಂಡಿದ್ದಾನೋ ವೀರ್ಯ ಲೋಕದ ಉಸೇನ್ ಬೋಲ್ಟ್?!

Leave A Reply