Home News Cancer: ವೀರ್ಯ ತಂದಿಟ್ಟ ಆಪತ್ತು – ಬರೋಬ್ಬರಿ 67 ಮಕ್ಕಳಿಗೆ ಕ್ಯಾನ್ಸರ್ !!

Cancer: ವೀರ್ಯ ತಂದಿಟ್ಟ ಆಪತ್ತು – ಬರೋಬ್ಬರಿ 67 ಮಕ್ಕಳಿಗೆ ಕ್ಯಾನ್ಸರ್ !!

Hindu neighbor gifts plot of land

Hindu neighbour gifts land to Muslim journalist

cancer : ದಾನಿಯ ವೀರ್ಯದೊಂದಿಗೆ ಜನಿಸಿದ 67 ಮಕ್ಕಳಿಗೆ ಕ್ಯಾನ್ಸರ್ ಬಂದಿರುವಂತಹ ಅಘಾತಕಾರಿ ಬೆಳವಣಿಗೆಗೆ ಒಂದು ಯುರೋಪ್ ನಲ್ಲಿ ನಡೆದಿದೆ.

ಹೌದು, ಯುರೋಪ್‌ನಲ್ಲಿ ಅಪರೂಪದ ಕ್ಯಾನ್ಸರ್ ಉಂಟುಮಾಡುವ ಜೀನ್‌ ಹೊಂದಿದ್ದ ವ್ಯಕ್ತಿಯೊಬ್ಬ ತನಗರಿವಿಲ್ಲದಂತೆ ವೀರ್ಯ ದಾನ ಮಾಡಿದ್ದಾನೆ. ಈತನ ವೀರ್ಯಕ್ಕೆ ಕನಿಷ್ಠ 67 ಮಕ್ಕಳು ಜನಿಸಿದ್ದಾರೆ. ಈ ಪೈಕಿ 23 ಮಕ್ಕಳಲ್ಲಿ ಈ ಅಪಾಯಕಾರಿ ಜೀನ್‌ ಪತ್ತೆಯಾಗಿದ್ದು, 10 ಮಕ್ಕಳಿಗೆ ಕ್ಯಾನ್ಸರ್ ಇರುವುದು ಈಗಾಗಲೇ ದೃಢಪಟ್ಟಿದೆ. ಇನ್ನೂ ಕೆಲವರು ಲ್ಯುಕೇಮಿಯಾ ಮತ್ತು ಹಾಡ್ಗ್ಕಿನ್ ಅಲ್ಲದ ಲಿಂಫೋಮಾದಂತಹ ಕ್ಯಾನ್ಸರ್‌ಗಳಿಂದ ಬಳಲುತ್ತಿದ್ದಾರೆ.

ಅಂದಹಾಗೆ 2008ರಲ್ಲಿ ವೀರ್ಯ ದಾನ ಮಾಡುವ ಸಂದರ್ಭದಲ್ಲಿ ಈ ರೂಪಾಂತರ ಇತ್ತು. ಆದರೆ ಕ್ಯಾನ್ಸರ್‌ಗೂ ಅದಕ್ಕೂ ಸಂಬಂಧ ಇರಲಿಲ್ಲ ಎಂದು ದೃಢಪಡಿಸಿದ ಯುರೋಪಿಯನ್ ವೀರ್ಯ ಬ್ಯಾಂಕ್‌, ದಾನಿ ವೀರ್ಯದ ಬಳಕೆಯ ಮೇಲೆ ಮಿತಿ ಇಲ್ಲದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.