Home Interesting Gucchi Mushroom Benefits: ಕುರಿ ಮಾಂಸಕ್ಕಿಂತಲೂ ದುಬಾರಿ ಈ ತರಕಾರಿ! ಮಾರಕ ರೋಗಕ್ಕೆ ಇದು ಪರಮೌಷಧ

Gucchi Mushroom Benefits: ಕುರಿ ಮಾಂಸಕ್ಕಿಂತಲೂ ದುಬಾರಿ ಈ ತರಕಾರಿ! ಮಾರಕ ರೋಗಕ್ಕೆ ಇದು ಪರಮೌಷಧ

Hindu neighbor gifts plot of land

Hindu neighbour gifts land to Muslim journalist

Himachal Pradesh: ಜನರು ಚಿನ್ನ ಎಂದು ಪರಿಗಣಿಸುವ ಹಾಗೂ ಮಾರುಕಟ್ಟೆಯಲ್ಲಿ ಸಾವಿರಾರು ರೂ ಬೆಲೆ ಹೊಂದಿರುವ ವಿಶೇಷ ಬೆಳೆಯೊಂದು ಹಿಮಾಚಲ ಪ್ರದೇಶದ ಪರ್ವತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ, ಇದರ ಹೆಸರು ಗುಚಿ ಎಂದು ಇದು ಅಣಬೆಯ ರೀತಿಯಲ್ಲಿ ಕಾಣಸಿಗುತ್ತದೆ. ಇದು ಹೆಚ್ಚು ಪೌಷ್ಟಿಕ ಹಾಗೂ ಔಷಧೀಯ ಗುಣಗಳನ್ನು ಹೊಂದಿದ್ದು, ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಹಲವಾರು ಖಾಯಿಲೆಗಳಿಗೆ ಇದು ರಾಮಬಾಣವಾಗಿದೆ. ಇದನ್ನು ವಿಶೇಷ ಪರ್ವತ ಪ್ರದೇಶಗಳಲ್ಲಿ ಮಾತ್ರ ನೈಸರ್ಗಿಕವಾಗಿ ಬೆಳೆಯುತ್ತದೆ.

ಪ್ರಸಕ್ತ ವರ್ಷ ಇಡೀ ಹಿಮಾಚಲ ಪ್ರದೇಶದಲ್ಲಿ ಕೇವಲ 200 ರಿಂದ 300 ಕೆಜಿಯಷ್ಟು ಮಾತ್ರವೇ ಬೆಳೆದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಒಂದು ಶೇಕಡಾ ಕೂಡ ಅಲ್ಲ, ಹಾಗೂ ಹವಾಮಾನ ವೈಪರೀತ್ಯದಿಂದ ಈ ರೀತಿಯಾಗಿದೆ ಎಂದು ಸ್ಥಳೀಯರು ಹಾಗೂ ಕೃಷಿಕರು ಹೇಳಿದ್ದಾರೆ. ಮಾರ್ಚ್ – ಏಪ್ರಿಲ್ ಸಾಮಾನ್ಯವಾಗಿ ಗುಚಿಗಳನ್ನು ಬೆಳೆಯಲು ಸರಿಯಾದ ಸಮಯವಾಗಿದ್ದು, ಈ ಬಾರಿಯ ಅತಿಯಾದ ಹಿಮಪಾತದಿಂದಾಗಿ ಬೆಳೆಯ ಪ್ರಮಾಣ ಕುಂಠಿತವಾಗಿದೆ.

ಕೇವಲ ಹಿಮಾಚಲ ಪ್ರದೇಶವಷ್ಟೇ ಅಲ್ಲದೆ ದೇಶ ವಿದೇಶಗಳಲ್ಲೂ ಇದನ್ನು ಬೆಳೆಯಲಾಗುತ್ತದೆ ಹಾಗೂ ಇದು ಪ್ರತಿ ಕಿಲೋ ಗ್ರಾಮ್ ಗೆ 16 ಸಾವಿರ ರೂ ಬೆಲೆ ಬಾಳುತ್ತದೆ. ಪ್ರಸ್ತುತ ಇದರ ಬೆಲೆ ಕೇವಲ 6-7 ಸಾವಿರ ಇದ್ದು, ಇವತ್ತಿಗೂ ದೆಹಲಿ ಮುಂಬೈ ನಂತಹ ದೊಡ್ಡ ದೊಡ್ಡ ನಗರಗಳ ಮಾರುಕಟ್ಟೆಗಳಲ್ಲಿ ಕಿಲೋ ಗ್ರಾಮ್ ಗೆ 30 ರಿಂದ 40 ಸಾವಿರ ರೂ ರವರೆಗೆ ಮಾರಾಟವಾಗುತ್ತದೆ.