Meghalaya: ಹನಿಮೂನ್ ಗೆ ತೆರಳಿದ್ದ ದಂಪತಿ ನಿಗೂಢ ನಾಪತ್ತೆ

Bhoopal: ಇತ್ತೀಚೆಗಷ್ಟೇ ಮದುವೆ ಆಗಿದ್ದ ನವಜೋಡಿಗಳು ಹನಿಮೂನ್ ಗೆಂದು ತೆರಳಿದ್ದಾಗ ನಾಪತ್ತೆಯಾಗಿರುವ ಘಟನೆಯೊಂದು ಮೇಘಾಲಯಲದಲ್ಲಿ ನಡೆದಿದೆ.

ಮಧ್ಯಪ್ರದೇಶ ಇಂದೋರ್ ನಿವಾಸಿಗಳಾದಂತಹ ರಾಜಾ ರಘುವಂಶಿ ಹಾಗೂ ಪತ್ನಿ ಸೋನಂ ರಘುವಂಶಿ ಹನಿಮೂನ್ ಗಾಗಿ ಮೇಘಾಲಯದ ಶಿಲಾನ್ಗ್ ಗೆ ತೆರಳಿದ್ದು, ಓಸ್ರಾ ಹಿಲ್ಸ್ ನಲ್ಲಿ ನಾಪತ್ತೆಯಾಗಿದ್ದಾರೆ.
ಓಸ್ರಾ ಹಿಲ್ಸ್ ಬಳಿ ಕೊನೆಯ ಬಾರಿ ಲೋಕೇಶನ್ ತೋರಿಸಿದ್ದು, ಸ್ಥಳೀಯರಿಂದ ಸ್ಕೂಟರ್ ಬಾಡಿಗೆ ಪಡೆದಿರುತ್ತಾರೆ. ಮೊದಲು ಸಂಪರ್ಕಕ್ಕೆ ಸಿಗದಾಗ ನೆಟ್ವೇರ್ಕ್ ಸಮಸ್ಯೆ ಎಂದು ತಿಳಿದ ಮನೆಯವರು ಮೇ.24 ರಿಂದ ಫೋನ್ ಆಫ್ ಆಗಿರುವುದ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಪೊಲೀಸ್ ಹುಡುಕಾಟದಲ್ಲಿ ಅವರು ತೆರಳಿದ್ದ ಬೈಕ್ ದೊರೆತಿದ್ದು, ಇನ್ನು ದಂಪತಿಗಳು ಪತ್ತೆಯಾಗಿಲ್ಲ. ಪೊಲೀಸರು ಈ ಕುರಿತಾಗಿ ಗಂಭೀರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Comments are closed.