Internet: ನಿಮ್ಮ ಮೊಬೈಲ್ ಡೇಟಾ ಖಾಲಿಯಾಗದೆ ಉಳಿಯುತ್ತಾ?ಬೇರೆಯವರಿಗೆ ಮಾರಿ, ಹಣ ಗಳಿಸಿ

Share the Article

Internet : ಇಂದಿನ ದಿನಗಳಲ್ಲಿ ಇಂಟರ್ನೆಟ್ ಎಂಬುದು ಬಹಳ ಪ್ರಾಮುಖ್ಯತೆ ಪಡೆದಿದೆ. ಸ್ಮಾರ್ಟ್‌ಫೋನ್ ಬಳಕೆದಾರರು ಇಂಟರ್ನೆಟ್‌ ಮೂಲಕ ಹಲವು ಆನ್‌ಲೈನ್‌ ಕೆಲಸಗಳನ್ನು ಮಾಡುತ್ತಿದ್ದಾರೆ. ಒಂದು ವೇಳೆ ಅಚಾನಕ್ ಆಗಿ ಸ್ಮಾರ್ಟ್‌ಫೋನಿನಲ್ಲಿ ಇಂಟರ್ನೆಟ್‌ ಕನೆಕ್ಷನ್ ಇಲ್ಲದಿದ್ದರೇ ಅಥವಾ ಅಡಚಣೆಯಾದರೇ ಬಳಕೆದಾರರು ಒಂದು ಕ್ಷಣ ಗೊಂದಲಗೊಂಡು ಬಿಡುತ್ತಾರೆ. ಇನ್ನು ಕೆಲವರು ಇಂಟರ್ನೆಟ್ಟನ್ನು ಸಾಕಷ್ಟು ಬಳಸಿದರು ಕೂಡ ಅದು ಖಾಲಿಯಾಗುವುದೇ ಇಲ್ಲ. ಹೀಗೆ ಇಂಟರ್ನೆಟ್ ಖಾಲಿಯಾಗದೆ ಉಳಿದರೆ ನೀವು ಅದನ್ನು ಮತ್ತೊಬ್ಬರಿಗೆ ಮಾರಿ ಸುಲಭದಲ್ಲಿ ಹಣ ಗಳಿಸಬಹುದು.

 

ಹೌದು, ಕೆಲವೊಮ್ಮೆ ಬಿಡುವಿಲ್ಲದ ಕೆಲಸದ ಕಾರಣ ಬಹುತೇಕ ಜನರ ಇಂಟರ್ನೆಟ್ ಡೇಟಾ ಕೋಟಾವು ಸಂಪೂರ್ಣವಾಗಿ ಬಳಕೆಯಾಗದೇ ಉಳಿಯುತ್ತದೆ. ಈಗ, ಈ ಉಳಿದ ಡೇಟಾವನ್ನು ಮಾರಾಟ ಮಾಡಿ ಹಣ ಗಳಿಸುವ ಅವಕಾಶವನ್ನು ಕೇಂದ್ರ ಸರ್ಕಾರದ PM-WANI (ಪ್ರಧಾನ ಮಂತ್ರಿ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್) ಯೋಜನೆ ಒದಗಿಸಿದೆ. ಈ ಯೋಜನೆಯಡಿ, ಯಾವುದೇ ವ್ಯಕ್ತಿ ಅಥವಾ ಸಣ್ಣ ವ್ಯಾಪಾರಿಗಳು ತಮ್ಮ ಇಂಟರ್ನೆಟ್ ಸಂಪರ್ಕವನ್ನು ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳ ಮೂಲಕ ಇತರರಿಗೆ ಒದಗಿಸಿ, ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಪರವಾನಗಿ ಅಥವಾ ದೊಡ್ಡ ಹೂಡಿಕೆಯ ಅಗತ್ಯವಿಲ್ಲ, ಕೇವಲ ಇಂಟರ್ನೆಟ್ ಸಂಪರ್ಕ ಮತ್ತು ವೈ-ಫೈ ರೂಟರ್ ಸಾಕು.

 

PM-WANI ಯೋಜನೆಯು ಭಾರತದಾದ್ಯಂತ ಕೈಗೆಟುಕುವ ಬೆಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ, ಯಾವುದೇ ವ್ಯಕ್ತಿ ತಮ್ಮ ಇಂಟರ್ನೆಟ್ ಸಂಪರ್ಕವನ್ನು ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್‌ಗಳ ಮೂಲಕ ಇತರರಿಗೆ ಹಂಚಿಕೊಳ್ಳಬಹುದು. ಉದಾಹರಣೆಗೆ, ಸಣ್ಣ ಅಂಗಡಿಯವರು, ಕಿರಾಣಿ ಅಂಗಡಿಗಳು, ಅಥವಾ ಕೆಫೆ ಮಾಲೀಕರು ತಮ್ಮ ವೈ-ಫೈ ಸಂಪರ್ಕವನ್ನು ಬಳಕೆದಾರರಿಗೆ ಮಾರಾಟ ಮಾಡಬಹುದು. ಇದರಿಂದ ಬಳಕೆದಾರರು ಕಡಿಮೆ ವೆಚ್ಚದಲ್ಲಿ ಇಂಟರ್ನೆಟ್ ಪಡೆಯುತ್ತಾರೆ, ಮತ್ತು ಹಾಟ್‌ಸ್ಪಾಟ್ ಸ್ಥಾಪಿಸಿದವರು ಹಣ ಗಳಿಸಬಹುದು.

 

ಅಂದಹಾಗೆ PM-WANI ಯೋಜನೆಯಡಿ ಡೇಟಾ ಮಾರಾಟದ ಯೋಜನೆಗಳ ಬೆಲೆ 5 ರೂಪಾಯಿಯಿಂದ 99 ರೂಪಾಯಿಗಳವರೆಗೆ ಇರುತ್ತದೆ. ಈ ಯೋಜನೆಗಳು ವಿವಿಧ ಡೇಟಾ ಪ್ರಮಾಣ ಮತ್ತು ಸಿಂಧುತ್ವದೊಂದಿಗೆ ಲಭ್ಯವಿವೆ. ಉದಾಹರಣೆಗೆ:

6 ರೂ.ಗೆ 1 ದಿನಕ್ಕೆ 1GB ಡೇಟಾ

9 ರೂ.ಗೆ 2 ದಿನಗಳಿಗೆ 2GB ಡೇಟಾ

18 ರೂ.ಗೆ 3 ದಿನಗಳಿಗೆ 5GB ಡೇಟಾ

25 ರೂ.ಗೆ 7 ದಿನಗಳಿಗೆ 20GB ಡೇಟಾ

49 ರೂ.ಗೆ 14 ದಿನಗಳಿಗೆ 40GB ಡೇಟಾ

99 ರೂ.ಗೆ 30 ದಿನಗಳಿಗೆ 100GB ಡೇಟಾ

 

ಒಬ್ಬ ವ್ಯಕ್ತಿಯು ತನ್ನ ಸ್ಥಳೀಯ ಪ್ರದೇಶದಲ್ಲಿ 20-30 ಬಳಕೆದಾರರಿಗೆ ದಿನಕ್ಕೆ 5-10 ರೂಪಾಯಿಗಳ ಡೇಟಾ ಮಾರಾಟ ಮಾಡಿದರೆ, ತಿಂಗಳಿಗೆ ಸಾವಿರಾರು ರೂಪಾಯಿಗಳ ಆದಾಯ ಗಳಿಸಬಹುದು. ಇದು ಸಣ್ಣ ವ್ಯಾಪಾರಿಗಳಿಗೆ ಹೆಚ್ಚುವರಿ ಆದಾಯದ ಮೂಲವಾಗಿದೆ.

 

ಇಂಟರ್ನೆಟ್ ಸಂಪರ್ಕ: ಮೊದಲಿಗೆ, ಜಿಯೋ ಫೈಬರ್, ಬಿಎಸ್‌ಎನ್‌ಎಲ್, ಅಥವಾ ಏರ್‌ಟೆಲ್‌ನಂತಹ ಸೇವಾ ಪೂರೈಕೆದಾರರಿಂದ ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕವನ್ನು ಪಡೆಯಿರಿ. ಅನಿಯಮಿತ ಡೇಟಾ ಯೋಜನೆ ಆಯ್ಕೆ ಮಾಡಿಕೊಂಡರೆ ಹೆಚ್ಚು ಲಾಭದಾಯಕವಾಗಿರುತ್ತದೆ.

 ಡೇಟಾ ಮಾರುವ ವಿಧಾನ :

ಇಂಟರ್ನೆಟ್ ಸಂಪರ್ಕ: ಮೊದಲಿಗೆ, ಜಿಯೋ ಫೈಬರ್, ಬಿಎಸ್‌ಎನ್‌ಎಲ್, ಅಥವಾ ಏರ್‌ಟೆಲ್‌ನಂತಹ ಸೇವಾ ಪೂರೈಕೆದಾರರಿಂದ ವಿಶ್ವಾಸಾರ್ಹ ಇಂಟರ್ನೆಟ್ ಸಂಪರ್ಕವನ್ನು ಪಡೆಯಿರಿ. ಅನಿಯಮಿತ ಡೇಟಾ ಯೋಜನೆ ಆಯ್ಕೆ ಮಾಡಿಕೊಂಡರೆ ಹೆಚ್ಚು ಲಾಭದಾಯಕವಾಗಿರುತ್ತದೆ.

ಹಾಟ್‌ಸ್ಪಾಟ್ ಸಾಧನ: ವೈ-ಫೈ ರೂಟರ್ ಅಥವಾ ಹಾಟ್‌ಸ್ಪಾಟ್ ಸಾಧನವನ್ನು ಸ್ಥಾಪಿಸಿ. ಮಾರುಕಟ್ಟೆಯಲ್ಲಿ ವಿವಿಧ ವ್ಯಾಪ್ತಿಯ ರೂಟರ್‌ಗಳು 2,000 ರೂಪಾಯಿಯಿಂದ 10,000 ರೂಪಾಯಿಗಳವರೆಗೆ ಲಭ್ಯವಿವೆ.

 

PDOA ಜೊತೆ ಸಂಪರ್ಕ: PM-WANI ಅನುಮೋದಿತ ಪಬ್ಲಿಕ್ ಡೇಟಾ ಆಫೀಸ್ (PDOA) ಜೊತೆ ಸಂಪರ್ಕ ಸಾಧಿಸಿ. ಸಿ-ಡಾಟ್ (C-DOT) ಒಂದು ಸರ್ಕಾರಿ PDOA ಆಗಿದ್ದು, ಲಾಗಿನ್ ವ್ಯವಸ್ಥೆ, OTP ಆಧಾರಿತ ಪ್ರವೇಶ, ಮತ್ತು ಯೋಜನಾ ಸೆಟಪ್ ಸೌಲಭ್ಯವನ್ನು ಒದಗಿಸುತ್ತದೆ.

 

ನೋಂದಣಿ: PDO ಆಗಿ ನೋಂದಾಯಿಸಿಕೊಳ್ಳಲು pmwani.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಹೆಸರು, ಮೊಬೈಲ್ ಸಂಖ್ಯೆ, ಅಂಗಡಿ/ಸ್ಥಳದ ವಿಳಾಸ, ಮತ್ತು ಇಂಟರ್ನೆಟ್ ಸಂಪರ್ಕದ ಮಾಹಿತಿಯನ್ನು ಒದಗಿಸಿ.

 

ಯೋಜನೆ ಸೆಟಪ್: PDOA ನೀಡಿದ ಲಾಗಿನ್ ಐಡಿ ಬಳಸಿ ಡೇಟಾ ಯೋಜನೆಯನ್ನು ರೂಪಿಸಿ ಮತ್ತು ಸೇವೆಯನ್ನು ಆರಂಭಿಸಿ.

PM-WANI ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ಹೆಚ್ಚುವರಿ ಆದಾಯದ ಮೂಲ ಸಿಗುವುದರ ಜೊತೆಗೆ, ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಇಂಟರ್ನೆಟ್ ಲಭ್ಯವಾಗುತ್ತದೆ. ಈ ಯೋಜನೆಗೆ ಯಾವುದೇ ಪರವಾನಗಿ ಅಗತ್ಯವಿಲ್ಲದಿರುವುದು ಇದರ ವಿಶೇಷತೆಯಾಗಿದೆ.

Comments are closed.