Ballari: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳಿಂದ ಜೈಲಿನಲ್ಲಿ ದಿನನಿತ್ಯ ಕಿರಿಕ್

Share the Article

Ballari: ಜೈಲಿನಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಆರೋಪಿಗಳಿಂದ ಬಳ್ಳಾರಿ ಜೈಲಿನಲ್ಲಿ ರಂಪಾಟ ನಡೆಯುತ್ತಿರುವ ಕುರಿತು ವರದಿಯಾಗಿದೆ. ಈ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ಬೇಕು ಇಲ್ಲದಿದ್ದರೆ ಜೈಲು ಸಿಬ್ಬಂದಿಗಳಿಗೆ ಬೆದರಿಸುತ್ತಾರೆ. ಜೈಲಿನಲ್ಲಿರುವ ಹಲೆ ವಿಡಿಯೋ ವೈರಲ್‌ ಮಾಡುವುದಾಗಿ ಪುಂಡರು ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.

ಈ ಆರೋಪಿಗಳು ಈಗಾಗಲೇ ಬೆಂಗಳೂರು, ಗುಲ್ಬರ್ಗ, ಧಾರವಾಡ ಜೈಲಿನಲ್ಲಿ ಇದೇ ರೀತಿ ಕಿರಿಕ್‌ ಮಾಡಿಕೊಂಡು ಬಂದು ಇದೀಗ ಬಳ್ಳಾರಿಗೆ ಬಂದಿದ್ದಾರೆ. ಇಲ್ಲೂ ಇವರ ರಂಪಾಟ ಮುಂದುವರಿದಿದೆ.

ಬಳ್ಳಾರಿ ಜೈಲು ಬೇಡ, ಶಿವಮೊಗ್ಗಕ್ಕೆ ಕಳುಹಿಸಬೇಕು. ಇಲ್ಲದಿದ್ದರೆ ಯಾವುದೋ ಒಂದು ವಿಚಾರದಲ್ಲಿ ಜಗಳ ಮಾಡುತ್ತಾರೆ. ಹರ್ಷ ಕೊಲೆ ಪ್ರಕರಣದ 10 ಜನ ಆರೋಪಿಗಳಲ್ಲಿ ಇಬ್ಬರು ಬಳ್ಳಾರಿ ಸೆಂಟ್ರಲ್‌ ಜೈಲಿನಲ್ಲಿದ್ದಾರೆ ಎಂದು ವರದಿಯಾಗಿದೆ. ಜಿಲಾನ್‌ ಮತ್ತು ಸೈಯದ್‌ ನಿಹಾಲ್‌ ಬಳ್ಳಾರಿ ಜೈಲಿನಲ್ಲಿದ್ದಾರೆ. ದಿನ ಒಂದೊಂದು ಸೌಲಭ್ಯ ಕೇಳಿ ಆರೋಪಿಗಳು ಜೈಲು ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ. ಹೊರಗಡೆಯ ಊಟ ನೀಡಿ ಎಂದು ಇಬ್ಬರು ಆರೋಪಿಗಳು ಹೇಳುತ್ತಿದ್ದಾರೆ.

ಇವರಿಬ್ಬರನ್ನು ಹೈಸೆಕ್ಯೂರಿಟಿ ಜೈಲಿನಲ್ಲಿ ಇಡಲಾಗಿದ್ದು, ಒಂಟಿಯಾಗಿ ಇರುವುದಕ್ಕೆ ಆಗಲ್ಲ, ಸಾಮಾನ್ಯ ಕೈದಿಗಳು ಇರುವ ವಾರ್ಡ್‌ ಕಡೆ ಶಿಫ್ಟ್‌ ಮಾಡಿ ಎಂದು ಕಿರಿಕ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೈಲಿನ ಬೇರೆ ಕೋಣೆಗೆ ಅಥವಾ ಜೈಲರ್‌ ಕೊಠಡಿಗೆ ಹೋಗುವ ಸಂದರ್ಭದಲ್ಲಿ ಚೆಕಪ್‌ ಮಾಡುವುದು ಕಡ್ಡಾಯ ನಿಯಮ. ಆದರೆ ನಮ್ಮನ್ನು ಚೆಕ್‌ ಮಾಡಬೇಡಿ ಎಂದು ಬೆದರಿಕೆ ಹಾಕಿದ್ದಾರೆ.

ನಾಲ್ಕೈದು ವರ್ಷದ ಹಳೆಯ ವಿಡಿಯೋ ಒಂದರಲ್ಲಿ ಆರೋಪಿಯೊಬ್ಬ ಜೈಲಿನಲ್ಲಿ ಜಿಮ್‌ ಮಾಡುತ್ತಿರುವ ವಿಡಿಯೋ ಇದ್ದು, ಇದನ್ನು ವೈರಲ್‌ ಮಾಡುತ್ತೇವೆ ಎಂದು ಆರೋಪಿಗಳು ಜೈಲಿನಲ್ಲಿ ಎಲ್ಲಾ ಸೌಲಭ್ಯ ನೀಡಲಾಗುತ್ತದೆ ಎಂದು ವಿಡಿಯೋ ವೈರಲ್‌ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿರುವ ಕುರಿತು ವರದಿಯಾಗಿದೆ.

Comments are closed.