Environmental Disaster: ಪ್ರಕೃತಿ ವಿಕೋಪ ಎದುರಿಸಲು ಜಿಲ್ಲಾಡಳಿತ ಸಜ್ಜು – ಕೊಡಗಿಗೆ ಆಗಮಿಸಿದ ಎನ್.ಡಿ.ಆರ್.ಎಫ್ ತಂಡ

Environmental Disaster: ಕೊಡಗಿನಲ್ಲಿ ಆಗುತ್ತಿರುವ ಮಳೆ ಹಾಗೂ ಮುಂದೆ ಬಾರಿ ಮಳೆಯಿಂದ ಯಾವುದಾದರೂ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತುರ್ತು ಪರಿಹಾರ ಕಾರ್ಯ ಕೈಗೊಳ್ಳಲು ಹಾಗೂ ಸುಗಮ ಜನಜೀವನಕ್ಕೆ ಅವಕಾಶ ಕಲ್ಪಿಸಲು ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ ಎನ್. ಡಿ ಆರ್.ಎಫ್ ತಂಡವನ್ನು ಬರಮಾಡಿಕೊಂಡಿದೆ. ಈಗಾಗಲೇ ಈ ತಂಡವು ಮೈತ್ರಿ ಹಾಲಿನಲ್ಲಿ ಬಂದು ತಂಗಿದೆ.

ಮುಂದಾಗುವ ಅನಾಹುತವನ್ನು ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಕಳೆದ ಬಾರಿ ಭಾರಿ ಮಳೆಗೆ ಕೊಡಗು ಜಿಲ್ಲೆಯಾದ್ಯಂತ ಭಾರಿ ಸಂಕಷ್ಟಗಳು ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಮುಂಜಾಗೃತ ಕ್ರಮವಾಗಿ ಬೇಗನೇ ಎಚ್ಚರಿಕೆಯನ್ನು ವಹಿಸಲು ಮುಂದಾಗಿದೆ.
Comments are closed.