Puttur: ಪುತ್ತೂರು: ಯುವಕನ ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೆ: ಕೇಸು ದಾಖಲು

Share the Article

Puttur: ಯುವಕನೋರ್ವನ ಮೇಲೆ ಪರಿಚಯಸ್ಥರು ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಪಾಣಾಜೆ ಗ್ರಾಮದಲ್ಲಿ ಮೇ 25 ರಂದು ನಡೆದಿರುವ ಕುರಿತು ವರದಿಯಾಗಿದೆ. ಆರ್ಲಪದವು ನಿವಾಸಿ ಪ್ರಕಾಶ್‌ (28) ಹಲ್ಲೆಗೊಳಗಾದ ವ್ಯಕ್ತಿ.

ಧನಂಜಯ ಮತ್ತು ಪುನೀತ್‌ ಆರೋಪಿಗಳು.

ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿರು ಮದಿರಾ ವೈನ್‌ ಶಾಪ್‌ನಿಂದ ಬಿಯರ್‌ ಬಾಟಲಿಯನ್ನು ಖರೀದಿ ಮಾಡಿ, ವೈನ್‌ ಶಾಪ್‌ಗೆ ಹೊಂದಿಕೊಂಡಂತೆ ಇರುವ ಶೆಡ್‌ನಲ್ಲಿದ್ದ ಚಯರ್‌ನಲ್ಲಿ ಕುಳಿತು ಬಿಯರ್‌ ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ರಾತ್ರಿ 8.30 ಗಂಟೆಗೆ ಪರಿಚಯದವರಾದ ಧನಂಜಯ ಮತ್ತು ಪುನೀತ್‌ ಎಂಬುವವರು ಬಂದಿದ್ದಾರೆ. ನಂತರ ಬೈಯಲು ಪ್ರಾರಂಭ ಮಾಡಿದ್ದಾರೆ. ಅನಂತರ ಟೇಬಲ್‌ ಮೇಲೆ ಇದ್ದ ಬಿಯರ್‌ ಬಾಟಲಿಯಿಂದ ಧನಂಜಯ್‌ ಪ್ರಕಾಶ್‌ ತಲೆಗೆ ಹೊಡೆದಿದ್ದು, ಪುನೀತ್‌ ಕೈಯಿಂದ ಹೊಡಿದಿದ್ದಾನೆ. ಪ್ರಕಾಶ್‌ ಬಲಕಾಲಿಗೆ ತುಳಿದು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ನೋವಿನಿಂದ ಪ್ರಕಾಶ್‌ ಬೊಬ್ಬೆ ಹೊಡೆಯುತ್ತಿದ್ದಂತೆ, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಯ ನಂತರ ಮಾಹಿತಿ ಪಡೆದು ಸ್ಥಳಕ್ಕೆ ಬಂದ ಪ್ರಕಾಶ್‌ ಅವರ ಅಣ್ಣ ನಂತರ ಪ್ರಕಾಶ್‌ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಕುರಿತು ಗಾಯಾಳು ಪ್ರಕಾಶ್‌ ನೀಡಿರುವ ದೂರಿನ ಪ್ರಕಾರ ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

Comments are closed.