Viral Video: ಕಚೇರಿಯಲ್ಲಿ ಮಹಿಳೆಯನ್ನು ತಬ್ಬಿಕೊಂಡ ಬಿಜೆಪಿ ನಾಯಕ: ಕುಚುಕುಚು ವಿಡಿಯೋ ವೈರಲ್‌

Share the Article

Uttar Pradesh: ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದಂತಹ ಅಮರ್ ಕಿಶೋರ್ ಕಶ್ಯಪ್ ಅಲಿಯಾಸ್ (ಬಾಮ್ ಬಾಮ್) ಎಂಬುವವರು ಮಹಿಳೆಯೊಬ್ಬರನ್ನು ತಬ್ಬಿಕೊಂಡಿರುವ ಸಿಸಿಟಿವಿಯ ದೃಶ್ಯಾವಳಿಯ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಈ ವಿಡಿಯೋ ಕುರಿತಾಗಿ ಜಿಲ್ಲಾಧ್ಯಕ್ಷ ಕಶ್ಯಪ್ ಮಾತಾನಾಡುತ್ತಾ, ಆ ಮಹಿಳೆಗೆ ಆರೋಗ್ಯ ಸರಿಯಿಲ್ಲದೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ತಾನು ಅವರಿಗೆ ಸಹಾಯ ಮಾಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ವೈರಲ್ ವಿಡಿಯೋ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದ್ದು, ಹಲವಾರು ಕಾಮೆಂಟ್ ಗಳು ಬರುತ್ತಿವೆ.

ಈ ಘಟನೆ ಕುರಿತಾಗಿ ಪಕ್ಷದಿಂದ ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರುವುದಿಲ್ಲ. ಆದರೂ ಕೂಡ ಈ ಘಟನೆ ಸ್ಥಳೀಯ ರಾಜಕಾರಣದಲ್ಲಿ ಬಹಳಷ್ಟು ಬದಲಾವಣೆಗಳನ್ನು ಹುಟ್ಟುಹಾಕಿದೆ.

Comments are closed.