Mangalore: ಮಂಗಳೂರು: ಹುಕ್ಕಾ ಬಾರ್‌ ಮೇಲೆ ಪೊಲೀಸರ ದಾಳಿ, ಮೂವರ ಬಂಧನ

Share the Article

Mangalore: ಹುಕ್ಕಾ ಬಾರ್‌ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಮೂವರ ಬಂಧನ ಮಾಡಿದ್ದಾರೆ. ಮಂಗಳೂರು ಪೂರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಕಂಕನಾಡಿಯಲ್ಲಿನ ಮ್ಯಾಕ್‌ಮಾಲ್‌ನ ಪಾರ್ಕಿಂಗ್‌ನಲ್ಲಿ ಬ್ಲ್ಯಾಕ್‌ ಮೂನ್‌ ರೆಸ್ಟೋ ಕೆಫೆ ಹೆಸರಿನಲ್ಲಿ ಹುಕ್ಕಾಬಾರ್‌ ನಡೆಸಲಾಗುತ್ತಿತ್ತು. ಸಿಸಿಬಿ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಸಿದ್ದಿಕ್‌, ಅಬ್ದುಲ್‌, ಸಫ್ವಾನ್‌ ಎಂಬ ಮೂವರನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ. 2024 ರಲ್ಲಿ ಕೆಫೆಟೇರಿಯಾ ನಡೆಸಲು ಮನಾಪಾದಿಂದ ಉದ್ದಿಮೆ ಪರವಾನಿಗೆ ಪಡೆದಿದ್ದರು. ಕೆಫೆಟೇರಿಯಾ ಹೆಸರಲ್ಲಿ ಹುಕ್ಕಾ ಬಾರ್‌ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಬಂಧಿತ ವ್ಯಕ್ತಿಗಳಿಂದ ಹುಕ್ಕಾ ಸೇದುವ ಉಪಕರಣ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಆದರೆ ಸಿಸಿಬಿ ಪೊಲೀಸರು ದಾಳಿ ಮಾಡಿ ಅರೆಸ್ಟ್‌ ಮಾಡಿದ್ದಾರೆಂಬ ಘಟನೆ ಕುರಿತು ಎಂಎಫ್‌ಸಿ ಮಾಲೀಕ ಸಿದ್ದೀಕ್‌ ಸ್ಪಷ್ಟನೆ ನೀಡಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ. ತನ್ನನ್ನು ಯಾರೂ ಬಂಧನ ಮಾಡಿಲ್ಲ, ತನಗೂ ಹುಕ್ಕಾ ಬಾರ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನಾನು ಪೊಲೀಸರ ವಿರುದ್ಧ ಕೋರ್ಟಿನಲ್ಲಿ ಪ್ರಶ್ನೆ ಮಾಡುತ್ತೇನೆ, ಪೊಲೀಸ್‌ ಕಮಿಷನರ್‌ ವಿರುದ್ಧ ಮಾನನಷ್ಟ ಕೇಸು ಹಾಕುತ್ತೇನೆಂದು ಹೆಡ್‌ಲೈನ್‌ ಕರ್ನಾಟಕ ಮಾಧ್ಯಮ್ಕಕೆ ಸಿದ್ದಿಕ್‌ ಹೇಳಿರುವ ಕುರಿತು ವರದಿಯಾಗಿದೆ.

Comments are closed.