Miss World 2025: ಮಿಸ್ ವರ್ಲ್ಡ್- 25 ಸ್ಪರ್ಧೆ: ನಮ್ಮನ್ನ ವೇಶ್ಯೆಯರಂತೆ ಕಾಣಲಾಗುತ್ತಿದೆ ಎಂದು ಸ್ಪರ್ಧೆ ಒದ್ದು ಬಂದ ಬ್ರಿಟನ್ ಸುಂದರಿ ಮಿಲ್ಲಾ ಮಾಗಿ

Share the Article

Miss World 2025: ತೆಲಂಗಾಣದಲ್ಲಿ ನಡೆಯುತ್ತಿರುವ ಮಿಸ್ ವರ್ಲ್ಡ್- 25 ಸ್ಪರ್ಧೆಯಲ್ಲಿ ಬ್ರಿಟನ್ ದೇಶವನ್ನು ಪ್ರತಿನಿಧಿಸುತ್ತಿದ್ದ ಸುಂದರಿ ಮಿಲ್ಲಾ ಮಾಗಿ ಅರ್ಧದಲ್ಲೇ ಸ್ಪರ್ಧೆಯಿಂದ ಹೊರನಡೆದಿದ್ದು, ಆಯೋಜಕರ ವಿರುದ್ಧ ಭಾರೀ ಆರೋಪಗಳನ್ನು ಮಾಡಿದ್ದಾರೆ. ವಿಶ್ವ ಸುಂದರಿಯರನ್ನು ಅಲ್ಲಿ ವೇಶ್ಯೆಯರ ತರ ಟ್ರೀಟ್ ಮಾಡಲಾಗುತ್ತಿದೆ ಅನ್ನುವ ಬಹುದೊಡ್ಡ ಆರೋಪವನ್ನು ಮಾಡಿ ಕೊನೆಯ ಹಂತದಲ್ಲಿ ಬಹುದೊಡ್ಡ ಸ್ಪರ್ಧೆಯಿಂದ ಎಡಗಾಲಿನಲ್ಲಿ ಒದ್ದು ನಡೆದಿದ್ದಾಳೆ ಮಿಸ್ ಮಿಲ್ಲಾ ಮಾಗಿ ಎಂಬ ಧೈರ್ಯವಂತ ಸುಂದರಿ!

ವಿಶ್ವ ಸುಂದರಿ ಸ್ಪರ್ಧೆಯನ್ನು ಹಳೇ ಕಾಲದ ರೀತಿ ನಡೆಸಲಾಗುತ್ತಿದೆ ಎಂದ ಮಿಲ್ಲಾ, ಆಯೋಜಕರು ತನ್ನನ್ನು ಶೋಷಣೆಗೊಳಪಡಿಸಿದ್ದರು ಎಂದಿದ್ದಾರೆ. ಇದರಿಂದ 74 ವರ್ಷದ ಇತಿಹಾಸವಿರುವ ಈ ಸ್ಪರ್ಧೆಯಲ್ಲಿ ಮೊದಲ ಬಾರಿ, ಮಿಸ್ ಇಂಗ್ಲೆಂಡ್ ಕಿರೀಟ ಹೊತ್ತ ಸುಂದರಿ ಅರ್ಧಕ್ಕೇ ಹೊರ ಬಂದಂತಾಗಿದೆ.

ಅಷ್ಟಕ್ಕೂ ನಡೆದದ್ದೇನು ಅಂತ ನೋಡಿದರೆ, ಹೈದರಾಬಾದಿನಲ್ಲಿ ನಡೆಯುತ್ತಿರುವ 180 ದೇಶಗಳು ಪ್ರತಿನಿಧಿಸುತ್ತಿರುವ ವಿಶ್ವಸುಂದರಿ ಸ್ಪರ್ಧೆಗೆ ಜುಲೈ ಮೊದಲ ವಾರದಲ್ಲಿ ವಿವಿಧ ದೇಶದ ವಿಜೇತ ಸ್ಪರ್ಧಿಗಳು ಬಂದಿಳಿದಿದ್ದರು. ಅಲ್ಲಿ ಆಯೋಜಕರು ತಮ್ಮ ಸ್ಪಾನ್ಸರ್ ಗಳನ್ನು ತೃಪ್ತಿಪಡಿಸಲು, ಅಸಭ್ಯವಾಗಿ ವರ್ತಿಸಬೇಕಿತ್ತು. ಆರು ಜನ ಶ್ರೀಮಂತ ಸ್ಪಾನ್ಸರ್ಗಳು ಕುಳಿತ ಟೇಬಲ್ಲಿನ ಮುಂದೆ ತಲ ಇಬ್ಬರು ಸ್ಪರ್ದಿಗಳು ಕೇವಲ ನೈಟ್ ಗೌನ್ ನಲ್ಲಿ ದಿನವಿಡೀ ಕುಳಿತು ದುಡ್ಡಿನ ಕುಲಗಳಾದಗಳನ್ನು ಸ್ಪಾನ್ಸರ್ ಗಳನ್ನು ಮನರಂಜನೆ ಮಾಡಬೇಕಿತ್ತು. ಆ ದುಡ್ಡಿನ ಸಾಹುಕಾರರ ಮುಂದೆ ದಿನ ಪೂರ್ತಿ ಹಲ್ಲು ಗಿಂಜಬೇಕಿತ್ತು. ಇದನ್ನು 60ರ ದಶಕದ ರೀತಿಯ ಸ್ಪರ್ಧೆ ಎಂದ ಆಕೆ, ‘ನಮ್ಮನ್ನು ವೇಶ್ಯೆಯ ತರ ನೋಡಲಾಗುತ್ತಿದೆ’ ಎಂದು ಅತ್ಯಂತ ಪ್ರಮುಖ ಸ್ಪರ್ಧೆಯನ್ನು ಬಿಟ್ಟು ಆತ್ಮವಿಶ್ವಾಸದಿಂದ ಹೊರಗೆ ನಡೆದಿದ್ದಾಳೆ ಮಿಸ್ ಮಿಲ್ಲ ಮ್ಯಾಗಿ.

ಮೊದಲು ತಾನು ವ್ಯಯಕ್ತಿಕ ಕಾರಣಗಳಿಂದ ಸ್ಪರ್ಧೆ ದೊರೆಯುವುದಾಗಿ ಆಕೆ ಹೇಳಿದ್ದಳು ಆದರೆ ನಂತರ ಸ್ಪರ್ದಾಳುಗಳನ್ನು ಮತ್ತು ತನ್ನ ಮನೋ ಸೌಂದರ್ಯವನ್ನು ಜಗತ್ತಿಗೆ ತೋರಿಸಿ ಸೌಂದರ್ಯ ಸ್ಪರ್ಧೆಗಳ ಪೊಳ್ಳುತನವನ್ನು ಬಯಲಿಗೆ ಎಳೆದಿದ್ದಾಳೆ ಮ್ಯಾಗಿ. ಆದರೆ ಮಿಲ್ಲಾ ತಾಯಿಯ ಅನಾರೋಗ್ಯದ ಕಾರಣ ಅವರು ಹೊರಹೋಗಿದ್ದಾಗಿ ಆಯೋಜಕರು ತಿಳಿಸಿದ್ದಾರೆ. ಆರೋಗ್ಯ ಎಲ್ಲದಕ್ಕಿಂತ ಮುಖ್ಯ ಎನ್ನುವ ಮಾತು ಆಡಿದ್ದಾರೆ ಮಿಲ್ಲಾ.

ಒಟ್ಟಾರೆ ಹೈದರಾಬಾದಿನಲ್ಲಿ ನಡೆಯುತ್ತಿರುವ ಭಾರತ ಆತಿಥ್ಯ ವಹಿಸಿದ ವಿಶ್ವಸುಂದರಿ ಸ್ಪರ್ಧೆ, ಸ್ಪರ್ಧೆಯ ರೀತಿ – ನಡೆಗೆ ಮತ್ತು ಆಯೋಜಕರ ವರ್ತನೆ ಇದೀಗ ವಿಶ್ವದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಾಳುಗಳನ್ನ ಕಾಣುವ ರೀತಿಯನ್ನು ವಿರೋಧಿಸಿ ಹೋರಾಟ ಮಿಲ್ಲಾ ಮ್ಯಾಗಿಗೆ ಬ್ರಿಟನ್ ರಾಜಕುಮಾರ ವಿಲಿಯಂ ಅವರ ಪ್ರಾಯೋಜಕತ್ವ ಇತ್ತು ಎನ್ನಲಾಗಿದೆ.

Comments are closed.