Bengaluru : 200 ಕೋಟಿ ಮೌಲ್ಯದ ಪ್ರೈವೇಟ್‌ ಜೆಟ್ ಖರೀದಿಸಿ, ಅಂಬಾನಿ ಮನೆ ಪುರೋಹಿತರಿಂದ ಪೂಜೆ ಮಾಡಿಸಿದ ಬೆಂಗಳೂರಿನ ವ್ಯಕ್ತಿ!!

Share the Article

 

Bengaluru : ಬೆಂಗಳೂರಿನ ನಿಗೂಢ ವ್ಯಕ್ತಿ ಒಬ್ಬರು ಬರೋಬ್ಬರಿ 200 ಕೋಟಿ ಮೌಲ್ಯದ ಪ್ರೈವೇಟ್ ಜೆಟ್ ಒಂದನ್ನು ಖರೀದಿಸಿ ಎಲ್ಲರಿಗೂ ಅಚ್ಚರಿ ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲದೆ ಅಂಬಾನಿ ಮನೆ ಪುರೋಹಿತರಿಂದ ಪೂಜೆ ಮಾಡಿಸಿ ಸುದ್ದಿಯಾಗಿದ್ದಾರೆ.

 

 ಹೆಸರು ಹೇಳಲು ಇಚ್ಚಿಸದ ಹಾಗೂ, ಅನಾಮಿಕರಂತೆ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ಸುಮಾರು 200 ಕೋಟಿ ವೆಚ್ಚದ ಪ್ರೈವೇಟ್ ಜೆಟ್ ಖರೀದಿಸಿದ್ದಾರೆ. ಬಳಿಕ ದೇಶದ ಸಿರಿವಂತ ವ್ಯಕ್ತಿಗಳ ಪೈಕಿ ಒಬ್ಬರಾಗಿರುವ ಅನಿಲ್‌ ಅಂಬಾನಿ ಸೇರಿದಂತೆ ಹಲವು ಪ್ರತಿಷ್ಠಿತ ಗಣ್ಯರ ಪುರೋಹಿತರೆಂದೇ ಪ್ರಸಿದ್ಧರಾಗಿರುವ ಪಂಡಿತ್‌ ಚಂದ್ರಶೇಖರ್‌ ಶರ್ಮಾ ಅವರ ಕೈಲಿ ಪೂಜೆ ಮಾಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕುಳಿತು ಗಲ್ಫ್‌ ಸ್ಟ್ರೀಮ್‌ ಜಿ 280 ಮಾಡೆಲ್‌ ನ ಜೆಟ್‌ ವಿಮಾನಕ್ಕೆ ಪೂಜಿಸುತ್ತಿರುವ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲೆಡೆ ವೈರಲ್‌ ಆಗಿದೆ.

https://www.instagram.com/reel/DJ_eKe_P8hG/?igsh=dDF0ZWcwdmsxdjZq

ಇನ್ನು ವಿಮಾನವು ಯುಎಸ್‌ ನ ಕ್ಯಾಲಿಫೋರ್ನಿಯಾ ಮೂಲದ ಎಂಪೈರ್‌ ಏವಿಯೇಷನ್‌ ಹೆಸರಿನಲ್ಲಿ ನೋಂದಣಿಯಾಗಿದೆ. ಆದರೆ ಇದನ್ನು ಖರೀದಿಸಿರುವ ವ್ಯಕ್ತಿ ಯಾರು, ಈತನಿಗೂ ಬೆಂಗಳೂರಿಗೂ ಇರುವ ನಂಟೇನು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

Comments are closed.