Delivery Boy attack: ಅಡ್ರೆಸ್‌ನಲ್ಲಿ ಒಂದು ಅಕ್ಷರ ತಪ್ಪಾಗಿದ್ದಕ್ಕೆ ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್

Delivery Boy attack: ಬೆಂಗಳೂರು: ಅಡ್ರೆಸ್‌ನಲ್ಲಿ ಒಂದು ಅಕ್ಷರ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ (Delivery Boy attack) ಹಲ್ಲೆ ನಡೆಸಿದ್ದ ಪ್ರಕರಣ ನಡೆದಿದೆ. ಡೆಲಿವರಿ ಬಾಯ್ ವಿಷ್ಣುವರ್ಧನ್ ಎಂಬಾತ ಶಶಾಂಕ್ ಎಂಬ ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ (Basaveshwar Nagar) ಈ ಘಟನೆ ನಡೆದಿತ್ತು. ಆ್ಯಪ್‌ವೊಂದರಲ್ಲಿ ಮೇ 21ರಂದು ಶಶಾಂಕ್ ಪತ್ನಿ ಆರ್ಡರ್ ಮಾಡಿದ್ದರು.

ಡೆಲಿವರಿ ಬಾಯ್ ಕರೆ ಮಾಡಿದಾಗ ಶಶಾಂಕ್ ನಾದಿನಿ ಸಾಮಗ್ರಿ ತೆಗೆದುಕೊಳ್ಳಲು ಹೋದಾಗ ಅಡ್ರೆಸ್ ತಪ್ಪಾದ ಕಾರಣ ಹೇಳಿ ವಿಚಾರವಾಗಿ ಬಾಯಿಗೆ ಬಂದ ಹಾಗೇ ಮಾತಾಡುತ್ತಿದ್ದ. ಇದನ್ನು ಕೇಳಿಸಿಕೊಂಡ ಶಶಾಂಕ್ ಹೊರಗಡೆ ಹೋಗಿ ಆತನಿಗೆ ಸಣ್ಣದಾಗಿ ಗದರಿದ್ದರು. ಆಗ ಏಕಾಏಕಿ ಈ ಡೆಲಿವರಿ ಬಾಯ್ ಹಲ್ಲೆ ನಡೆಸಿದ್ದು, ಶಶಾಂಕ್’ರ ಕಣ್ಣಿಗೆ ಗಾಯವಾಗಿದೆ.
ಸದ್ಯ ಈ ಘಟನೆ ಕುರಿತು ಶಶಾಂಕ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಡೆಲಿವರಿ ಕಂಪನಿ ಶಶಾಂಕ್’ರಿಗೆ ಕ್ಷಮೆ ಕೇಳಿದೆ.ಹಲ್ಲೆ ನಡೆಸಿದ ದೃಶ್ಯಗಳು ಅದೇ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಯಿಂದಾಗಿ ನನ್ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಆಪರೇಶನ್ ಮಾಡುವ ಸಾಧ್ಯತೆ ಅಧಿಕ ಎನ್ನಲಾಗುತ್ತಿದೆ.
Comments are closed.