Puttur: ಕಾಂಕ್ರೀಟ್‌ ಮಿಕ್ಸಿಂಗ್‌ ವಾಹನದಡಿಗೆ ಬಿದ್ದು ಮಹಿಳೆ ಸಾವು

Share the Article

Puttur: ರಸ್ತೆ ಕಾಂಕ್ರಿಟೀಕರಣ ಕಾಮಗಾರಿನ ಸಂದರ್ಭ ಕಾಂಕ್ರೀಟ್‌ ಮಿಕ್ಸಿಂಗ್‌ ವಾಹನದಡಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆಟ್ಟಂಪಾಡಿ ಗ್ರಾಮದ ಬಿಲ್ವಗಿರಿ ಸಮೀಪದ ನಡೆದಿದೆ.

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೊಮ್ಮಾಳ ಗ್ರಾಮದ ಬಸವರಾಜರವರ ಪತ್ನಿ ಗೌರಮ್ಮ (28) ಮೃತ ಮಹಿಳೆ.

ಒಂದು ಕೋಟಿ ರೂ. ಅನುದಾನದಲ್ಲಿ ಕಾಂಕ್ರೀಟೀಕರಣ ಕಾಮಗಾರಿ ಬೆಟ್ಟಂಪಾಡಿ ಗ್ರಾಮಪಂಚಾಯತ್‌ ವ್ಯಾಪ್ತಿಯ ರೆಂಜದಿಂದ ಬಿಲ್ವಗಿರಿ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೆಲ ದಿನಗಳಿಂದ ನಡೆಯುತ್ತಿದ್ದು, ರಾಯಚೂರು ಮೂಲದ ಒಂದೇ ಕುಟುಂಬದ ಹಲವು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಮೇ 23 ರಂದು ಸಂಜೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕಾಂಕ್ರೀಟ್‌ ಮಿಕ್ಸಿಂಗ್‌ ಮಿಲ್ಲರ್‌ ವಾಹನ ಹಿಂದಕ್ಕೆ ಚಲಿಸಿದೆ. ಈ ಸಂದರ್ಭ ಗೌರಮ್ಮ ಆಕಸ್ಮಿಕವಾಗಿ ವಾಹನದ ಚಕ್ರದಡಿಗೆ ಬಿದ್ದು ತಲೆಗೆ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸಂಪ್ಯ ಠಾಣಾ ಎಸ್‌ಐ ಜಂಬೂರಾಜ್‌ ಮಹಾಜನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಪತಿ ಬಸವರಾಜ ನೀಡಿದ ದೂರಿನ ಪ್ರಕಾರ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.