Mangalore: ಮಂಗಳೂರಿನಲ್ಲಿ ಮರ್ಡರ್: ಮದುವೆ ವಿಚಾರಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ

Mangalore: ಮಂಗಳೂರು ಹೊರವಲಯದ ವಳಚ್ಚಿಲ್‌ನಲ್ಲಿ ತಡರಾತ್ರಿ ಚಾಕುವಿನಿಂದ ಇರಿದು ವ್ಯಕ್ತಿಯೋರ್ವರನ್ನು ಕೊಲೆ ಮಾಡಿರುವ ಘಟನೆ ಕುರಿತು ವರದಿಯಾಗಿದೆ.

ಮದುವೆ ವಿಚಾರಕ್ಕೆ ಗಲಾಟೆ ನಡೆದಿದ್ದು, ನಂತರ ಕೊಲೆಯಲ್ಲಿ ಅಂತ್ಯವಾಗಿದೆ. ವಾಮಂಜೂರು ನಿವಾಸಿ ಸಲ್ಮಾನ್ (50) ಕೊಲೆಯಾದ ವ್ಯಕ್ತಿ ಎಂದು ವರದಿಯಾಗಿದೆ. ಚಾಕುವಿನಿಂದ ಇರಿದು ಸಂಬಂಧಿ ಮುಸ್ತಾಫ ಕೊಲೆ ಮಾಡಿದ್ದಾನೆ ಎನ್ನುವ ಆರೋಪವಿದೆ. ಸಲ್ಮಾನ್ ಅವರ ಇಬ್ಬರು ಪುತ್ರರ ಮೇಲೆ ಹಲ್ಲೆ ಮಾಡಿ ಮುಸ್ತಾಫ ಪರಾರಿಯಾಗಿದ್ದಾನೆ.
ಸಲ್ಮಾನ್ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಅವರು ಗಾಯಗೊಂಡಿದ್ದು, ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಗಿದೆ. ಸಂಬಂಧಿ ಮುಸ್ತಾಫನಿಗೆ ಸಲ್ಮಾನ್ ಮದುವೆ ಮಾಡಿಸಿದ್ದ. ಮದುವೆಯ ವೇಳೆ ಮುಸ್ತಾಫ ಮತ್ತು ಸಲ್ಮಾನ್ ನಡುವೆ ವೈಮನಸ್ಸು ಉಂಟಾಗಿತ್ತು. ಈ ವಿಚಾರ ಕುರಿತು ಮಾತನಾಡಲು ಮುಸ್ತಾಫ ಸಲ್ಮಾನ್ ಅವರನ್ನು ಕರೆಸಿದ್ದ. ಹೀಗಾಗಿ ತನ್ನ ಇಬ್ಬರು ಪುತ್ರರ ಜೊತೆ ಮುಸ್ತಾಫ ಬಳೀ ಸಲ್ಮಾನ್ ಬಂದಿದ್ದು, ಈ ಸಂದರ್ಭ ವಾಗ್ವಾದ ನಡೆದು ಸಲ್ಮಾನ್‌ಗೆ ಮುಸ್ತಾಫ ಚಾಕುವಿನಿಂದ ಇರಿದಿದ್ದಾನೆ.
ತಂದೆಯ ರಕ್ಷಣೆಗೆಂದು ಬಂದ ಇಬ್ಬರು ಪುತ್ರರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಆರೋಪಿ ಮುಸ್ತಾಫನಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
Comments are closed.