ಯುದ್ಧ ಸೋತರೂ, ಪಾಕ್ ಪರ 4 ಡೈಲಾಗ್ ಡೆಲಿವರಿ ಮಾಡಿದ್ದಕ್ಕೆ ಪಾಕಿ ಸೇನಾ ಮುಖ್ಯಸ್ಥನಿಗೆ ಫೀಲ್ಡ್ ಮಾರ್ಷಲ್ ಆಗಿ ಭಡ್ತಿ

New delhi: ಪಹಲ್ಗಾಮ್ ದಾಳಿಯ ಎದುರಾಗಿ ಭಾರತದ ಆಪರೇಷನ್ ಸಿಂಧೂರ ಪಾಕಿಸ್ತಾನದ ವಿರುದ್ಧವಾಗಿ ಗೆಲುವನ್ನು ಕಂಡಿದ್ದು, ಪಾಕ್ ಸೋಲನ್ನಪ್ಪಿರುವುದು ನಮಗೆಲ್ಲ ತಿಳಿದೇ ಇದೆ. ಇದೀಗ ಈ ಕಾರ್ಯಾಚರಣೆಯಲ್ಲಿ ಪಾಕ್ ಸೋತರೂ ಕೂಡ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಗೆ ಸೇನೆಯಲ್ಲಿನ ಅತ್ಯುನ್ನತ ಪದವಿ ‘ಫೀಲ್ಡ್ ಮಾರ್ಷಲ್’ ಆಗಿ ಬಡ್ತಿ ನೀಡಲಾಗಿದೆ. ಕೇವಲ ಪಾಕಿಸ್ತಾನದ ಪರ 4 ಡೈಲಾಗ್ ಡೆಲಿವರಿ ಮಾಡಿದ ಕಾರಣ ಪಾಕ್ ಸೇನಾ ಮುಖ್ಯಸ್ಥನಿಗೆ ಫೀಲ್ಡ್ ಮಾರ್ಷಲ್ ಎಂಬ ದೊಡ್ಡ ಹುದ್ದೆ ನೀಡಲಾಗಿದೆ.

ಸಾಮಾನ್ಯವಾಗಿ ಅಗಾಧ ಸಾಧನೆಗೆ ಈ ಒಂದು ಬಡ್ತಿಯನ್ನು ನೀಡಲಾಗುತ್ತದೆ, ಸಿಂಧೂರದ ಸೇನಾ ಸಂಘರ್ಷದ ಸಂದರ್ಭದಲ್ಲಿ ಪಾಕ್ ಸಶಸ್ತ್ರ ಪಡೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಈ ಬಡ್ತಿಯನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಪಾಕ್ ಭಾರತದೆದುರು ಸೋತು ಭಾರತದ DGMO ಗೆ ಕರೆ ಮಾಡುವ ಮೂಲಕ ಕದನ ವಿರಾಮ ಒಪ್ಪಂದ ಮಾಡಿಕೊಳ್ಳುವಂತೆ ಬೇಡಿಕೊಂಡಿತ್ತು. ಅಲ್ಲದೇ ಭಾರತದ ದಾಳಿಯಿಂದ ಪಾಕಿಸ್ತಾನದಲ್ಲಿ ಆಗಿರುವ ನಷ್ಟದ ಕುರಿತು ವಿಡಿಯೋ, ಫೋಟೋಗಳೊಂದಿಗೆ ಪಾಕಿಸ್ತಾನ ಕೂಡಾ ಮಾಹಿತಿ ಹಂಚಿಕೊಂಡಿತ್ತು.
ಪಹಲ್ಗಾಮ್ ನಲ್ಲಿ ನಡೆದ ಭಾರತೀಯರ ಮೇಲಿನ ದಾಳಿಗೆ ಜನರಲ್ ಅಸಿಮ್ ಮುನೀರ್ ಅವರ ಪ್ರಚೋದಕನಾಕಾರಿ ಭಾಷಣವೇ ಕಾರಣ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಜನರಲ್ ಅಸೀಮ್ ಮುನೀರ್ ಅವರನ್ನು ದೇಶದ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡುವ ಮಹತ್ವದ ನಿರ್ಧಾರವನ್ನು ಸಂಪುಟ ಕೈಗೊಂಡಿರುತ್ತದೆ.
ತಪ್ಪು ಮಾಡಿದರೂ ಅನಂತರ ಸೋತರೂ ಕೂಡ ತಪ್ಪನ್ನೇ ಸಮರ್ಥಿಸಿಕೊಳ್ಳುವ ಕೆಲಸ ಪಾಕಿಸ್ತಾನ ಮಾಡುತ್ತಿದೆ. ಇದೀಗ ಈ ಬಡ್ತಿಯು ಕೂಡ ಅದಕ್ಕೊಂದು ಉದಾಹರಣೆಯಾಗಿದ್ದು ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದೆ.
Comments are closed.