ಹಾಳಾಗಿ ಗುಂಡಿ ಬಿದ್ದ ರಸ್ತೆ: ಬಿಬಿಎಂಪಿಗೆ 50 ಲಕ್ಷ ರೂ. ನೋಟಿಸ್!

Share the Article

Bengaluru: ಬೆಂಗಳೂರಿನ 43 ವರ್ಷದ ವ್ಯಕ್ತಿಯೊಬ್ಬರು ನಗರದಲ್ಲಿನ ಹದಗೆಟ್ಟ ಮತ್ತು ವಾಹನ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಗಳಿಂದ ಎದುರಾದಂತಹ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಂದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ 50 ಲಕ್ಷ ರೂ. ಪರಿಹಾರವನ್ನು ಕೋರಿ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ.

ರಿಚ್ಮಂಡ್ ಟೌನ್ ನಿವಾಸಿಯಾಗಿರುವಂತಹ ದಿವ್ಯ ಕಿರಣ್ ತಮ್ಮ ನೋಟಿಸ್‌ನಲ್ಲಿ, ತಾನು ತೆರಿಗೆ ಪಾವತಿಸುವವನಾಗಿದ್ದರೂ ಕೂಡ ತನಗೆ ಮೂಲಭೂತ ಸೌಕರ್ಯ ಸಿಗುವಲ್ಲಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ. ಇವರು ತೀವ್ರವಾದ ಕುತ್ತಿಗೆ ಮತ್ತು ಬೆನ್ನು ನೋವಿನಿಂದಾಗಿ ಹಲವು ಬಾರಿ ಚಿಕಿತ್ಸೆ ಪಡೆದಿರುವುದಾಗಿ ಹೇಳಿದ್ದು, ಈ ನೋಟಿಸ್‌ಗೆ ಬಿಬಿಎಂಪಿಯಿಂದ ತಕ್ಷಣ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿರುವುದಿಲ್ಲ ಮತ್ತು ಈ ಕುರಿತಾಗಿ ಮೇ 14 ರಂದು ಕಿರಣ್ ರವರ ವಕೀಲರು ಕೆ.ವಿ. ಲವೀನ್ ಕೂಡ ಮತನಾಡಿರುತ್ತಾರೆ.
ಈ ರೀತಿಯಾಗಿ ಹದಗೆಟ್ಟಿರುವ ರಸ್ತೆಗಳಿಂದಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಮೈ-ಕೈ ನೋವುಗಳು ಎದುರಾಗುತ್ತಿವೆ. ಆದರೂ ಕೂಡ ಸರ್ಕಾರದಿಂದ ಸರಿಯಾದ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ. ಕಿರಣ್ ಅವರು ತಮಗಾದ ಸಮಸ್ಯೆಗೆ ಪರಿಹಾರವಾಗಿ 60 ಲಕ್ಷ ರೂ ಗಳನ್ನು 15 ದಿನಗಳ ಒಳಗಾಗಿ ನೀಡಬೇಕು, ಒಂದು ವೇಳೆ ನೀಡದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಬಿಬಿಎಂಪಿ ಗೆ ನೀಡಿದ ನೋಟಿಸ್ ನ ಶುಲ್ಕ 10,000 ವನ್ನು ಕೊಡಬೇಕೆಂದು ನೋಟಿಸ್ ಮೂಲಕ ಹೇಳಿದ್ದಾರೆ.

ಬೆಂಗಳೂರು ರಸ್ತೆಗಳು ತುಂಬಾ ಅವ್ಯವಸ್ಥೆಯಿಂದ ಕೂಡಿವೆ. ಚಿಕ್ಕ ಗುಂಡಿ ಕೂಡ ತುಂಬಾ ತೊಂದರೆ ಉಂಟುಮಾಡಬಹುದು ಎಂದು ಹೇಳಿದ್ದು, ಈ ಸಮಸ್ಯೆಗಳನ್ನು ಹಿಂದೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾಗಿಯೂ ತಿಳಿಸಿದ್ದಾರೆ.

Comments are closed.