Mangalore: ನಿಂತಿದ್ದ ಕಾಲೇಜು ಬಸ್ಸಿಗೆ ಸಿಟಿ ಬಸ್‌ ಡಿಕ್ಕಿ; ವಿದ್ಯಾರ್ಥಿಗಳಿಗೆ ಗಾಯ, ವಿಡಿಯೋ ವೈರಲ್‌

Share the Article

Mangalore: ನಿಂತಿದ್ದ ಕಾಲೇಜು ಬಸ್ಸಿಗೆ ಖಾಸಗಿ ಸಿಟಿ ಬಸ್‌ ಹಿಂದಿನಿಂದ ಡಿಕ್ಕಿ ಹೊಡೆದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ. ಬಲ್ಮಠದ ಲಕ್ಷ್ಮೀ ಮೆಮೋರಿಯಲ್‌ ನರ್ಸಿಂಗ್‌ ಕಾಲೇಜಿನ ಬಸ್ಸನ್ನು ರಸ್ತೆ ಬದಿ ನಿಲ್ಲಿಸಲಾಗಿದ್ದು, ಅದಕ್ಕೆ ವಿದ್ಯಾರ್ಥಿಗಳು ಹತ್ತುತ್ತಿದ್ದರು. ಈ ವೇಳೆ ಸ್ಟೇಟ್‌ಬ್ಯಾಂಕ್‌ ಕಡೆಯಿಂದ ಕೊಣಾಜೆಗೆ ತೆರಳುತ್ತಿದ್ದ ಖಾಸಗಿ ಸರ್ವಿಸ ಬಸ್‌ ನೇರವಾಗಿ ಬಂದು ಹಿಂದಿನಿಂದ ಬಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ವೇಗಕ್ಕೆ ಕಾಲೇಜು ಬಸ್ಸು ಮುಂದಕ್ಕೆ ಹೋಗಿದ್ದು, ಹಿಂಭಾಗದಲ್ಲಿ ಕುಳಿತಿದ್ದ ಐದಾರು ವಿದ್ಯಾರ್ಥಿಗಳಿಗೆ ಮತ್ತು ಖಾಸಗಿ ಬಸ್ಸಿನ ಮುಂಭಾಗದಲ್ಲಿದ್ದ ಕೆಲವು ಪ್ರಯಾಣಿಕರಿಗೆ ಗಾಯವಾಗಿರುವ ಕುರಿತು ವರದಿಯಾಗಿದೆ. ಪೊಲೀಸರ ಪ್ರಕಾರ ಹತ್ತು ಮಂದಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್ಸಿನ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Comments are closed.