Bantwala: ಬಂಟ್ವಾಳ: ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು!

Share the Article

Bantwala: ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಬಂಟ್ವಾಳ ( bantwala) ಪೊಳಲಿ ದೇವಸ್ಥಾನ ವಠಾರದಲ್ಲಿ ನಡೆದಿದೆ.

 

ಅಮ್ಮಾಡಿ ಗ್ರಾಮದ ಕಾಯರ್ ಮಾರ್ ನಿವಾಸಿ ಗೀತಾ (63) ಮೇ 18 ರಂದು ಮಗನ ಮದುವೆ ಇರುವ ಪ್ರಯುಕ್ತ ಶನಿವಾರ 3,99,500/-ರೂಪಾಯಿ ಮೌಲ್ಯದ 41.800 ಗ್ರಾಂ ತೂಕದ ಪದಕ ಇರುವ ಕರಿಮಣಿ ಸರ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ 9.820 ಗ್ರಾಂ ತೂಕದ ಚಿನ್ನದ ಬಳೆ ಖರೀದಿಸಿ ಸಂಪ್ರದಾಯದಂತೆ ದೇವರಲ್ಲಿ ಚಿನ್ನ ಇಟ್ಟು ಪೂಜಿಸುವ ಸಲುವಾಗಿ ತನ್ನ ಮಗನೊಂದಿಗೆ ಬೆಳ್ಳಿಗೆ 11.45 ಗಂಟೆಗೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ, ತನ್ನ ಬ್ಯಾಗ್ ನಲ್ಲಿರಿಸಿರುತ್ತಾರೆ. ಆ ಬಳಿಕ ದೇವರ ಪೂಜೆಯಲ್ಲಿ ಪಾಲ್ಗೊಂಡು ಬ್ಯಾಗನ್ನು ಗಮನಿಸಿದಾಗ ಬ್ಯಾಗಿಗೆ ಹಾಕಿದ್ದ ಜಿಪ್ ಸ್ವಲ್ಪ ತೆಗೆದಿರುವುದು ಗಮನಕ್ಕೆ ಬಂದಿದೆ. ಇದರಿಂದ ಬ್ಯಾಗ್ ಪರಿಶೀಲಿಸಿದಾಗ ಬ್ಯಾಗಿನಲ್ಲಿದ್ದ ಚಿನ್ನಾಭರಣ ಕಾಣೆಯಾಗಿರುತ್ತದೆ. ಈ ಬಗ್ಗೆ ಪರಿಸರದಲ್ಲಿ ಹುಡುಕಾಡಿದ್ದು, ಚಿನ್ನಾಭರಣ ಪತ್ತೆಯಾಗದೇ ಇದ್ದಾಗ, ನಂತರ ವಿಚಾರವನ್ನು ದೇವಸ್ಥಾನದ ಕಛೇರಿಯಲ್ಲಿ ತಿಳಿಸಿದ್ದು. ದೇವಸ್ಥಾನದವರೂ ಕೂಡಾ ಇತರ ಭಕ್ತಾದಿಗಳ ಪ್ರಯತ್ನಿಸಿದರಾದರೂ ಪತ್ತೆಯಾಗಿರುವುದಿಲ್ಲ, 

 

 ಕಳವಾಗಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ 4,99,500/-ರೂಪಾಯಿ ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.