Bangalore: ಬೆಂಗಳೂರಿನಲ್ಲಿ ಪಾಕಿಸ್ತಾನ ಪರ ಘೋಷಣೆ: ಟೆಕ್ಕಿ ಬಂಧನ

Bangalore: ಬೆಂಗಳೂರಿನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಯುವಕನನ್ನು ಬಂಧಿಸಲಾಗಿದೆ. ಛತ್ತೀಸ್ಗಡ ಮೂಲದ ಶುಭಾಂಶು ಶುಕ್ಲಾ (26) ಬಂಧಿತ ಆರೋಪಿ.

ವೈಟ್‌ಫೀಲ್ಡ್‌ನ ಪ್ರಶಾಂತ್ ಲೇಔಟ್‌ನ ಪಿಜಿಯಲ್ಲಿ ಮೇ 9 ರಂದು ರಾತ್ರಿ 12.30 ರಲ್ಲಿ ಘಟನೆ ನಡೆದಿತ್ತು. ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ್ದ ಶುಭಾಂಶು ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ಪಿಜಿಯಲ್ಲಿ ನೆಲೆಸಿದ್ದ.
ಅಪರೇಷನ್ ಸಿಂಧೂರ್ ಸಕ್ಸಸ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮಾಡುವಾಗ ಪಿಜಿಯ ಬಾಲ್ಕನಿಯಲ್ಲಿ ಪಾಕಿಸ್ತಾನ ಪರ ಶುಕ್ಲಾ ಘೋಷಣೆ ಕೂಗಿದ್ದ. ಉಗ್ರರೇ ಬಂದು ಬಿಟ್ಟರು ಎಂದು ಪಿಜಿಯಲ್ಲಿದ್ದ ಯುವಕರು ಹೆದರಿ ಬಿಟ್ಟಿದ್ದರು. ಹೊರಗೆ ಬಂದು ನೋಡಿದಾಗ ಇಬ್ಬರು ಪಿಜಿಯ ಬಾಲ್ಕನಿಯಲ್ಲಿ ನಿಂತಿದ್ದು, ಈ ವೇಳೆ ಓರ್ವ ಯುವಕ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದು, ಎದುರುಗಡೆ ಪಿಜಿಯಲ್ಲಿದ್ದ ಯುವಕ ಇದನ್ನು ರೆಕಾರ್ಡ್ ಮಾಡಿದ್ದಾನೆ. ನಂತರ 112 ಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, ಪರಿಶೀಲನೆ ಸಂದರ್ಭ ಶುಭಾಂಶು ಪಾಕಿಸ್ತನ ಪರ ಘೋಷಣೆ ಕೂಗಿರುವುದು ದೃಢಪಟ್ಟಿದೆ. ವೈಟ್‌ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಜೈಲಿಗೆ ಕಳುಹಿಸಿದ್ದಾರೆ.
Comments are closed.