Uttar Pradesh: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆಯ ಸಾಮೂಹಿಕ ಅತ್ಯಾಚಾರ, ಸ್ನೇಹಿತೆ ಕೊಲೆ!

Share the Article

Uttar Pradesh:ಉತ್ತರ ಪ್ರದೇಶದಲ್ಲಿ ಚಲಿಸುವ ಕಾರಿನಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ. ಮಹಿಳೆಯ ಜೊತೆಗಿದ್ದ ಸ್ನೇಹಿತೆ ವಾಹನದಿಂದ ಹೊರಗೆ ತಳ್ಳಲ್ಪಟ್ಟಿದ್ದು ನಂತರ ಸಾವಿಗೀಡಾಗಿದ್ದಾರೆ.

ಗ್ರೇಟರ್‌ ನೋಯ್ಡಾದಿಂದ ಇಬ್ಬರು ಮಹಿಳೆಯರನ್ನು ಕರೆದುಕೊಂಡು ಬಲವಂತದಿಂದ ಕಾರಿಗೆ ಹತ್ತಿಸಲಾಗಿದೆ. ನಂತರ ಈ ದುಷ್ಕೃತ್ಯ ಎಸೆಯಲಾಗಿದೆ.

ಸಂದೀಪ್‌, ಅಮಿತ್‌, ಗೌರವ್ ಕೃತ್ಯವೆಸಗಿದ ಆರೋಪಿಗಳು.

ಕಾರಿನಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಜಗಳವಾದಾಗ ಮೀರತ್‌ ಜಿಲ್ಲೆಯಲ್ಲಿ ಓರ್ವ ಮಹಿಳೆಯನ್ನು ಕಾರಿನಿಂದ ಹೊರಗೆ ತಳ್ಳಲಾಗಿದೆ. ನಂತರ ಆಕೆ ಸಾವಿಗೀಡಾಗಿದ್ದಾರೆ. ಚಲಿಸುವ ಕಾರಿನಲ್ಲಿದ್ದ ಮತ್ತೋರ್ವ ಮಹಿಳೆ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆ ನಂತರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ನಂತರ ಆಕೆ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾಳೆ. ಆರ್ನಿಯಾ ಪ್ರದೇಶದ ಬುಲಂದ್‌ ಶಹರ್‌-ಅಲಿಘರ್‌ ಹೆದ್ದಾರಿಯ ಬಳಿ ಜಂಟಿ ಪೊಲೀಸ್‌ ತಂಡ ಆರೋಪಿಗಳನ್ನು ತಡೆದಿದ್ದು, ನಂತರ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಆರೋಪಿಗಳ ಕಾಲುಗಳಿಗೆ ಗುಂಡು ತಗುಲಿದೆ.

ಸಂದೀಪ್‌ ಮತ್ತು ಗೌರವ್‌ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಬಂಧಿತ ವ್ಯಕ್ತಿಗಳಿಂದ ಅಕ್ರಮ ಬಂದೂಕುಗಳು, ಮದ್ದು ಗುಂಡುಗಳು, ಬಳಸಲಾದ ವಾಹನವನ್ನು ವಶಪಡಿಸಿದ್ದಾರೆ. ಖುರ್ಜಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

Comments are closed.