Kasaragod: ಯುವತಿಯ ಮೇಲೆ ಆಸಿಡ್ ದಾಳಿ- ಯುವಕ ಆತ್ಮಹತ್ಯೆಗೆ ಶರಣು!

Kasaragod: ಚಿತ್ತಾರಿಕ್ಕಲ್ ನ ಕಂಬಳ್ಳೂರಿನಲ್ಲಿ ವ್ಯಕ್ತಿಯೋರ್ವ ಯುವತಿ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ನಡೆದಿದೆ. ಕಂಬಳ್ಳೂರಿನಲ್ಲಿ ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಸಿಂಧು ಮೋಲ್ (34) ಎಂಬ ಮಹಿಳೆಯ ಮೇಲೆ ಆಸಿಡ್ ಸುರಿದಿದ್ದಾನೆ. ಕಣ್ಣು, ಕುತ್ತಿಗೆ, ಮುಖ, ತೊಡೆಯ ಮೇಲೆ ಆಸಿಡ್ ಬಿದ್ದಿದು, ಸುಟ್ಟ ಗಾಯಗಳಾಗಿದೆ. ಈಕೆ ಈಗ ಪರಿಯಾರಂನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೃೆ.

ಕಂಬಳ್ಳೂರು ಮೂಲದ ರತೀಶ್(34) ಆರೋಪಿ. ಈತ ಬೋರ್‌ವೆಲ್ ನಿರ್ಮಾಣ ಕಂಪನಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಅಂಗಡಿಯಲ್ಲಿ ಕುಳಿತಿದ್ದ ಸಿಂಧು ಮೇಲೆ ಈತ ಆಸಿಡ್ ಸುರಿದಿದ್ದಾನೆ. ನಂತರ ಹತ್ತಿರದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಕುರಿತು ವರದಿಯಾಗಿದೆ.
ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸಿಂಧು ತನ್ನ ಫ್ಯಾನ್ಸಿ ಅಂಗಡಿಯಲ್ಲಿದ್ದಾಗ ಈ ಘಟನೆ ನಡೆದಿದೆ. ರತೀಶ್ ಸಿಂಧುವನ್ನು ಹಿಂಬಾಲಿಸುತ್ತಿದ್ದು, ಈ ಹಿಂದೆ ಆಸಿಡ್ ದಾಳಿಯ ಬೆದರಿಕೆ ಹಾಕಿದ್ದನೆಂದು ತಿಳಿದು ಬಂದಿದೆ. ಆಕೆ ಇತ್ತೀಚೆಗೆ ದೂರನ್ನು ದಾಖಲು ಮಾಡಿದ್ದಳು. ರತೀಶ್ ಮತ್ತು ಸಿಂಧು ನೆರೆಹೊರೆಯವರಾಗಿದ್ದು, ಆಪ್ತ ಸ್ನೇಹಿತರಾಗಿದ್ದರು. ಇವರಿಬ್ಬರ ಮಧ್ಯೆ ಯಾವುದೋ ಕಾರಣಕ್ಕೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂದು ಪೊಲೀಸ್ ವರದಿಗಳು ಹೇಳಿವೆ.
ಅನಂತರ ಆತ ಆಕೆಗೆ ಕಿರುಕುಳ ನೀಡಲು ಪ್ರಾರಂಭ ಮಾಡಿದ್ದಾರೆ. ಹೀಗಾಗಿ ಆಕೆ ಚಿತ್ತಾರಿಕ್ಕಲ್ ಪೊಲೀಸರಿಗೆ ದೂರನ್ನು ನೀಡಿದ್ದಾಳೆ.
Comments are closed.