Home News Murder: ನಾನಿರುವಾಗ ಬೇರೆಯವರ ಜೊತೆ ಮಾತಾಡ್ತಾಳೆ; ಪತ್ನಿಯ ಕೊಂದು ಅತ್ತೆ ಕರೆ ಮಾಡಿದ ಅಳಿಯ!

Murder: ನಾನಿರುವಾಗ ಬೇರೆಯವರ ಜೊತೆ ಮಾತಾಡ್ತಾಳೆ; ಪತ್ನಿಯ ಕೊಂದು ಅತ್ತೆ ಕರೆ ಮಾಡಿದ ಅಳಿಯ!

Hindu neighbor gifts plot of land

Hindu neighbour gifts land to Muslim journalist

Murder: ಬಾಗಪತ್‌ನಲ್ಲಿ ಆಟೋ ಚಾಲಕ ಪ್ರಶಾಂತ್‌ ತನ್ನ ಪತ್ನಿ ನೇಹಾಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ನಡೆದಿದೆ. ನನ್ನ ಕಣ್ಣೆದುರು ಬೇರೆ ಯಾರ ಜೊತೆನೂ ಮಾತನಾಡಬಾರದು ಆದರೂ ಮಾತನಾಡಿದ್ಲು ಕೊಂದು ಬಿಟ್ಟೆ ಎಂದು ಆರೋಪಿ ಹೇಳಿರುವುದು ವಿಡಿಯೋದಲ್ಲಿದೆ.

ತನ್ನ ಹೆಂಡತಿಯನ್ನು ಕೊಲೆ ಮಾಡಿದ ನಂತರ ಅಳಿಯ ತನ್ನ ಅತ್ತೆಗೆ ಕರೆ ಮಾಡಿ ಹೇಳಿದ್ದಾನೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಬ್ಬಳೇ ಇರುವಾಗ ಈ ಘಟನೆ ನಡೆದಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಆಕೆಯನ್ನು ಕೊಲೆ ಮಾಡಿದ ನಂತರ ಆರೋಪಿ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡು ಬಂದಿದೆ. ನನ್ನೆದುರು ನೀನು ಯಾರೊಂದಿಗಾದರೂ ಮಾತನಾಡಿದರೂ ಅಂದೇ ನಿನ್ನನ್ನು ಕೊಲ್ಲುತ್ತೇನೆ ಎಂದು ನಾನು ಮದುವೆಯಾದ ದಿನನೇ ಆಕೆಗೆ ಎಚ್ಚರಿಕೆ ನೀಡಿದ್ದ ಎಂದು ತನ್ನ ಅತ್ತೆಗೆ ಹೇಳಿದ್ದಾನೆ.

ನಾನು ಆಕೆಯನ್ನು ಕೊಂದು ಎಸೆದಿದ್ದೇನೆ. ಈಗ ನಾನು ಪೊಲೀಸ್‌ ಠಾಣೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ನಾವಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ವರ್ಷದ ಮಗನಿದ್ದಾನೆ. ನೇಹಾ ಸಹರಾನ್‌ಪುರದವಳು. ಈಕೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇವರಿಬ್ಬರಿಗೆ ನಾಲ್ಕು ವರ್ಷದ ಮಗನಿದ್ದಾನೆ.

ಇವರಿಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪ್ರಶಾಂತ್‌ ತನ್ನ ಪತ್ನಿಗೆ ವಿವಾಹೇತನ ಸಂಬಂಧವಿದೆ ಎಂದು ಅನುಮಾನ ಪಡುತ್ತಿದ್ದ. ನಿರಂತರ ಜಗಳದಿಂದ ಬೇಸತ್ತ ನೇಹಾ ತನ್ನ ತಾಯಿ ಮನೆಗೆ ಅದೇ ಪ್ರದೇಶದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಈತ ಈ ಹಿಂದೆ ಕೂಡಾ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. 20 ದಿನಗಳ ಹಿಂದೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

ಆರೋಪಿ ತನ್ನ ಕೃತ್ಯ ಒಪ್ಪಿಕೊಂಡಿದ್ದು, ಕೊಲೆಗೆ ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ನಡೆಸುತ್ತಿದ್ದಾರೆ.