Crime News: ʼಅಪರೇಷನ್ ಸಿಂಧೂರ್ʼ ಸಂಭ್ರಮಾಚರಣೆ ವೇಳೆ 8 ವರ್ಷದ ಬಾಲಕನಿಗೆ ಚೂರಿ ಇರಿದ ಕಿಡಿಗೇಡಿಗಳು!

Crime News: ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಅಪರೇಷನ್ ಸಿಂಧೂರ್ ವೈಮಾನಿಕ ದಾಳಿ ಮಾಡಿದ ನಂತರ, ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಎಂಟು ವರ್ಷದ ಬಾಲಕನನ್ನು ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ ಎನ್ನುವ ಆರೋಪವಿದೆ.

ಸಾರ್ವಜನಿಕ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ʼಸುರ್ಜೀತ್ ಎಂಬ ಬಾಲಕ ʼಹಿಂದೂಸ್ತಾನ್ ಜಿಂದಾಬಾದ್ʼ ಮತ್ತು ʼಪಾಕಿಸ್ತಾನ್ ಮುರ್ದಾಬಾದ್ʼ ಘೊಷಣೆ ಕೂಗಿದ್ದು, ಆಗ ಮೊಹಿದ್ ಖಾನ್ ಮತ್ತು ಆತನ ಸಹಚರ ವಾಸಿಮ್ ಎಂಬ ಯುವಕರು ಬಾಲಕನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯರು ಇದನ್ನು ಕಂಡು ರೊಚ್ಚಿಗೆದ್ದು, ಚಾಕು ಇರಿದವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸುರ್ಜೀತ್ ನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆತನ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧನದಲ್ಲಿರುವ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಶಹಜಹಾನ್ಪುರ ಪೊಲೀಸರು ಹೇಳಿದ್ದಾರೆ.
Comments are closed.