Fire accident: ಭೀಕರ ಅಗ್ನಿ ಅವಘಡ: 5ನೇ ಅಂತಸ್ತಿನಿಂದ ಹಾರಿದ ಯುವತಿ!

Fire accident: ಅಹ್ಮದಾಬಾದ್ ಗುಜರಾತ್ ನಲ್ಲಿ ನಡೆದ ರಾಜಧಾನಿ ಭೀಕರ ಜೀವ ಅಗ್ನಿಅವಘಡದಲ್ಲಿ (Fire accident) ಮಹಿಳೆ ಒಬ್ಬಳು ಜೀವ ಉಳಿಸಿಕೊಳ್ಳಲು ಕಟ್ಟಡದ 5ನೇ ಅಂತಸ್ತಿನಿಂದ ಕೆಳಗೆ ಹಾರಿದ್ದಾರೆ.

ಅಹ್ಮದಾಬಾದ್ ನ ಇಂದಿರಾ ಸೇತುವೆ ಪ್ರದೇಶದ ಆಟ್ರೆ ಆರ್ಕಿಡ್‌ನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಅಪಾರ್ಟ್‌ಮೆಂಟ್ ನಲ್ಲಿ ಎದ್ದ ಬೆಂಕಿಯ ಕೆನ್ನಾಲೆಗೆ ಭಯಗೊಂಡು ಕಟ್ಟಡದಿಂದ ಜಿಗಿದ ಯುವತಿಯೊಬ್ಬಳು ಬದುಕುಳಿದಿದ್ದಾಳೆ.
ಯುವತಿ ಕೆಳಗೆ ಹಾರುತ್ತಲೇ ಕೆಳಗೆ ಇದ್ದ ಸುಮಾರು 20-25 ಜನರು ಬಟ್ಟೆಯಂತಹ ವಸ್ತುವನ್ನು ಬಲೆ ರೀತಿಯಲ್ಲಿ ಹಿಡಿದುಕೊಂಡಿದ್ದು ಯುವತಿ ನೇರವಾಗಿ ಅದರೊಳಗೆ ಬಿದ್ದಿದ್ದಾಳೆ. ಆ ಮೂಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
Comments are closed.