Pragnent: ಗರ್ಭಿಣಿಯಾದ 6ನೇ ತರಗತಿ ವಿದ್ಯಾರ್ಥಿನಿ: ಅಪ್ರಾಪ್ತ ಬಾಲಕನ ಮನೆಯಲ್ಲಿ ಬಿಟ್ಟು ಹೋದ ಕುಟುಂಬಸ್ಥರು

Share the Article

Pragnent: ಒಡಿಶಾ(Odisha) ರಾಯಗಢದಲ್ಲಿ ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು(Student) ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ವಿದ್ಯಾರ್ಥಿನಿ 17 ವರ್ಷದ ಹುಡುಗನೊಂದಿಗೆ ಪ್ರೇಮ ಸಂಬಂಧ(Love affair) ಹೊಂದಿದ್ದಳು ಮತ್ತು ಆಕೆ ಆತನ ಜತೆ ದೈಹಿಕ ಸಂಪರ್ಕ(Physical contact) ಹೊಂದಿದ್ದಳು. ಇದರಿಂದ ಆಕೆ 6 ತಿಂಗಳ ಗರ್ಭಿಣಿಯಾಗಿದ್ದು, ವಿಷಯ ತಿಳಿದ ಆಕೆಯ ಕುಟುಂಬದವರು ಆಕೆಯನ್ನು ಆ ಬಾಲಕನ ಮನೆಯಲ್ಲಿ ಬಿಟ್ಟು ಹೋಗಿದ್ದಾರೆ.

ಮಾಹಿತಿಯ ಪ್ರಕಾರ, ರಾಯಗಡದ ಸದರ್ ಬ್ಲಾಕ್‌ನ ಜೂಡಿ ಗ್ರಾಮದ 17 ವರ್ಷದ ಅಪ್ರಾಪ್ತ ಬಾಲಕ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಅಪ್ರಾಪ್ತ ಬಾಲಕನಿಗೆ ಆ ಅಪ್ರಾಪ್ತ ಬಾಲಕಿಯ ಜೊತೆ ಪ್ರೇಮ ಸಂಬಂಧ ಇದ್ದ ನಂತರ, ಅವರು ದೈಹಿಕ ಸಂಬಂಧ ಬೆಳೆಸಿಕೊಂಡರು. ನಂತರ, ಅವಳು 6 ತಿಂಗಳ ಗರ್ಭಿಣಿಯಾದ ನಂತರ, ಅಪ್ರಾಪ್ತ ಬಾಲಕಿಯ ಕುಟುಂಬವು ಬಾಲಕಿಯನ್ನು ಅಪ್ರಾಪ್ತ ಬಾಲಕನ ಮನೆಯಲ್ಲಿ ಬಿಟ್ಟು ಹೋಗಿದೆ.

ಈ ಘಟನೆಯ ಸುದ್ದಿ ಹರಡಿದ ನಂತರ, ರಾಯಗಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಸಿಡಬ್ಲ್ಯೂಸಿ ಮುಂದೆ ಹಾಜರುಪಡಿಸಿತು. ಮತ್ತೊಂದೆಡೆ, ಘಟನೆಯ ತನಿಖೆ ನಡೆಯುತ್ತಿದೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷರು ಮಾಹಿತಿ ನೀಡಿದರು.

Comments are closed.