Heart Attack: ಬೆಳಗ್ಗೆದ್ದು ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ, ಸಾವು! ವಿಡಿಯೋ ವೈರಲ್‌

Share the Article

ಬೆಳಗ್ಗೆ ಎದ್ದು ವ್ಯಾಯಾಮ ಮಾಡುತ್ತಿರುವಾಗಲೇ ವ್ಯಕ್ತಿಯೊಬ್ಬ ಕುಸಿದು ಸಾವಿಗೀಡಾದ ದಾರುಣ ಘಟನೆ ಉತ್ತರಾಖಂಡದ ಗರ್ವಾಲ್‌ನಲ್ಲಿ ನಡೆದಿದೆ. ಕಳೆದ ಎಪ್ರಿಲ್‌ 17 ರಂದು ಪ್ರಮೋದ್‌ ಬಿಂಜೋಲಾ ಎಂಬ ವ್ಯಕ್ತಿ ತಮ್ಮ ಮನೆ ಸಮೀಪವೇ ಬೆಳಗ್ಗಿನ ಜಾವ ನಡಿಗೆ, ವ್ಯಾಯಾಮ ಮಾಡುತ್ತಿದ್ದರು. ಪ್ರತಿನಿತ್ಯ ತಪ್ಪದೇ ವ್ಯಾಯಾಮ ಮಾಡುತ್ತಿದ್ದರು.

ಆದರೆ ಅಂದು ಮಾತ್ರ ಅವರಿಗೆ ಇದ್ದಕ್ಕಿದ್ದಂತೆ ದಣಿವಾದ ಅನುಭವವಾಗಿದೆ. ಕೂಡಲೇ ವ್ಯಾಯಾಮ ನಿಲ್ಲಿಸಿದ ಪ್ರಮೋದ ರಸ್ತೆ ಬದಿಯಿರುವ ಸ್ಲ್ಯಾಬ್‌ ಮೇಲೆ ಕುಳಿತಿದ್ದಾರೆ. ಅಷ್ಟೇ, ಕೆಲವೇ ಹೊತ್ತಲ್ಲಿ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ನೋವಿನಿಂದ ಚೀರಾಡಿದ್ದಾರೆ. ಅಲ್ಲಿದ್ದ ಜನರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದು, ಅಷ್ಟರಲ್ಲೇ ಹೃದಯಾಘಾತದಿಂದ ಪ್ರಮೋದ್‌ ಬಿಂಜೋಲಾ ಮೃತ ಹೊಂದಿದ್ದಾರೆ.

Comments are closed.