POCSO: ಹೆಣ್ಮಕ್ಕಳಿಗೆ ಕಿರುಕುಳ: ಪಾಸ್ಟರ್ ಜಾನ್ ಜೇಬರಾಜ್ ಕೇರಳದಲ್ಲಿ ಬಂಧನ!

Share the Article

POCSO: ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಪ್ರಸಿದ್ಧ ಕ್ರಿಸ್ತಿಯನ್ ಗಾಯಕ ಪಾಸ್ಟರ್ ಜಾನ್ ಜೇಬರಾಜ್ (37) ಬಂಧನವಾಗಿದೆ.  ಕೇರಳದ ಮುನ್ನಾರ್ ನಲ್ಲಿ ಅರೆಸ್ಟ್ ಆಗಿದ್ದಾನೆ.

ಕೊಯಂಬತ್ತೂರಿನ ಮಹಿಳಾ ಠಾಣೆ ಪೊಲೀಸರು ಜೇಬರಾಜ್ ನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದು, ಜೈಲಿಗಟ್ಟಿದ್ದಾರೆ.

2024ರ ಮೇ ತಿಂಗಳಲ್ಲಿ ಜೇಬರಾಜ್ ತನ್ನ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿ ಸಂದರ್ಭದಲ್ಲಿ 17 ಮತ್ತು 14 ವರ್ಷದ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಈತನ ಮೇಲೆ ಪೋಕ್ಸೋ ಕೇಸ್ ದೂರು ದಾಖಲಾಗಿತ್ತು. ದೂರು ದಾಖಲಾದ ನಂತರ ಆತ ತಲೆಮರೆಸಿಕೊಂಡಿದ್ದ.

ಜಾನ್ ಜೇಬರಾಜ್ ಕೊಯಂಬತ್ತೂರಿನ ಕಿಂಗ್ಸ್ ಜನರೇಶನ್ ಚರ್ಚ್ ನಲ್ಲಿ ಪಾಸ್ಟರ್ ಆಗಿದ್ದ. ಅಲ್ಲದೆ, ಕ್ರಿಸ್ತಿಯನ್ನರ ಪ್ರಾರ್ಥನೆ ಹಾಡುಗಳನ್ನ ಹಾಡುವುದರ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ಅಭಿಮಾನಿಗಳನ್ನ ಪಡೆದುಕೊಂಡಿದ್ದ. ಪೋಕ್ಸೋ ಕಾಯ್ದೆಯಡಿ ಜಾನ್ ಜೇಬರಾಜ್ ವಿರುದ್ಧ ಕೇಸು ದಾಖಲಾಗಿತ್ತು.

ಜಾನ್ ಗೆ ಮದುವೆಯಾಗಿದ್ದು ಹೆಂಡತಿ ಈತನಿಂದ ಡಿವೋರ್ಸ್ ಪಡೆದು ದೂರಾಗಿದ್ದಳು.

Comments are closed.