Odisha: ಪುರಿ ಜಗನ್ನಾಥ ದೇವಾಲಯದ ಮೇಲೆ ಗರುಡ ಹಾರಾಟ!

Share the Article

Odisha: ಪುರಿ ಜಗನ್ನಾಥ ದೇವಾಲಯದ ಮೇಲೆ ಗರುಡವೊಂದು ಹಾರಾಟ ನಡೆಸಿದೆ. ಪತಿತಪಬನ್ ಬನ ಪವಿತ್ರ ಧ್ವಜವನ್ನು ಹೋಲುವ ಬಟ್ಟೆಯ ತುಂಡನ್ನು ಕಚ್ಚಿ ಹಿಡಿದ ಗರುಡ ಆಕಾಶದಲ್ಲಿ ದೇವಾಲಯದ ಸುತ್ತ ಸುತ್ತುತ್ತಿರುವ ವೀಡಿಯೊ ಇದೀಗ ಭಾರೀ ವೈರಲ್ ಆಗಿದೆ.
ಏಪ್ರಿಲ್ 12ರ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಪ್ರದೇಶದಲ್ಲಿ ಹಠಾತ್ ನಾರ್ವೆಸ್ಟ‌ರ್ ಬಿರುಗಾಳಿ ಬೀಸಿದಾಗ ಈ ದೃಶ್ಯ ಕಾಣಸಿಕ್ಕಿದೆ ಎನ್ನಲಾಗಿದೆ.

ದೇವಾಲಯದ ಮೇಲೆ ಕೆಲ ಹೊತ್ತು ಹಾರಿ ನಂತರ ಸಮುದ್ರದ ಕಡೆಗೆ ಹೋಗಿ ಕಣ್ಮರೆಯಾಗಿದೆ.

ಸಾಮಾನ್ಯವಾಗಿ ದೇವಾಲಯದ ಸುತ್ತಲೂ ಯಾವುದೇ ಪಕ್ಷಿಗಳು ಈ ರೀತಿ ಹಾರುವುದಿಲ್ಲ ಎಂಬ ನಂಬಿಕೆ ಇದೆ ಮತ್ತು ಪಕ್ಷಿಗಳ ರಾಜ ‘ಗರುಡ’ ದೇವಾಲಯವನ್ನು ರಕ್ಷಿಸುತ್ತಿದ್ದಾನೆ ಎಂದು ದೀರ್ಘಕಾಲದ ಪುರಾಣ ನಂಬಿಕೆ. ಆದರೆ ಈಗ ನಡೆದ ಘಟನೆ ಜನರನ್ನು ಆಶ್ಚರ್ಯಗೊಳಿಸಿದೆ.

ಇದೊಂದು ದೈವಿಕ ಸಂಕೇತವೆಂದು ಕೆಲವೊಬ್ಬರು ಭಾವಿಸಿದ್ರೆ, ಇತರರು ಇದು ಕೆಟ್ಟ ಶಕುನವಾಗಿರಬಹುದೇ ಎಂಬ ಆತಂಕ ಹೊರಹಾಕಿರುವ ಕುರಿತು ವರದಿಯಾಗಿದೆ.

Comments are closed.