Madikeri: ಮಡಿಕೇರಿ ಬಳಿ ಕಾರು ಅಪಘಾತ! ಗಾಂಜಾ ಸಾಗಾಟ ಮಾಡುತ್ತಿದ್ದ ಪುತ್ತೂರಿನ ಮೂವರ ಬಂಧನ!

Madikeri: ಮಡಿಕೇರಿ ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರು ಯುವಕರನ್ನು ಬಂಧಿಸಿದ್ದಾರೆ. ಕಾರೊಂದು ದೇವರಕೊಲ್ಲಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದಾಗ ಈ ಘಟನೆ ನಡೆದಿರುವುದು ಕಂಡು ಬಂದಿದೆ.

ಪಿರಿಯಾಪಟ್ಟಣದಿಂದ ಪುತ್ತೂರಿಗೆ ತೆರಳುತ್ತಿದ್ದ KL 14 AC 1248 ನೋಂದಣಿಯ ಸ್ವಿಫ್ಟ್ ಕಾರು ದೇವರಕೊಲ್ಲಿ ಸಮೀಪ ರಸ್ತೆಯ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದ್ದು, ನಂತರ ಸ್ಥಳೀಯರು ಸಹಾಯಕ್ಕೆಂದು ಧಾವಿಸಿದಾಗ ಕಾರಿನೊಳಗೆ ಗಾಂಜಾ ಪೊಟ್ಟಣ ಕಂಡುಬಂದಿವೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕಾರಿನಲ್ಲಿದ್ದ ಕಬಕದ ಫಾಝರೀದ್ (27), ದರ್ಬೆಯ ಮೊಹಮ್ಮದ್ ಮುಸ್ತಾಫ್ (27) ಮತ್ತು ಚಾಬಿರ್ ಎಂಬ ಮೂವರನ್ನು ಬಂಧಿಸಿದ್ದಾರೆ.
ಪೊಲೀಸರು ಕಾರು ಮತ್ತು ಗಾಂಜಾವನ್ನು ವಶಪಡಿಸಿಕೊಂಡಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.