Viral Video : ಕತ್ತರಿಸಿಟ್ಟ ‘ಟೊಮೇಟೊ ಗರ್ಭಿಣಿ’ ಎಂದು ತೋರಿಸಿದ ಪ್ರೆಗ್ನೆನ್ಸಿ ಕಿಟ್- ವಿಡಿಯೋ ನೋಡಿ ಫ್ರಿಜ್ ಬಳಿಗೆ ಓಡಿದ ಮಹಿಳೆಯರು

Share the Article

Viral Video : ಮಹಿಳೆ ಗರ್ಭಿಣಯಾಗಿದ್ದಾಳೋ ಇಲ್ಲೋ ಎಂದು ನೋಡಲು ಪ್ರೆಗ್ನೆನ್ಸಿ ಕಿಟ್‌ ತಂದು ಪರೀಕ್ಷೆ ಮಾಡುವುದು ಸಹಜ. ಆದರೆ ಈ ಪ್ರಗ್ನೆನ್ಸಿ ಕಿಟ್ ಬಳಸಿ ಟೊಮೇಟೊ ಗರ್ಭಿಣಿಯಾಗಿದೆ ಎಂಬುದನ್ನು ವ್ಯಕ್ತಿಯೊಬ್ಬರು ತಿಳಿಸಿದ್ದು, ಇದನ್ನು ಕಂಡ ಮಹಿಳೆಯರೆಲ್ಲರೂ ಫ್ರಿಜ್ ಗಳಿಗೆ ಓಟ ಕಿತ್ತಿದ್ದಾರೆ.

ಹೌದು, ಇಲ್ಲೊಂದು ವಿಡಿಯೋ ವೈರಲ್‌ ಆಗಿದೆ. ಅದರಲ್ಲಿ ಮನೆಯಲ್ಲಿ ಕತ್ತರಿಸಿಟ್ಟ ಟೊಮೆಟೋ ಗರ್ಭಿಣಿಯಾಗಿದೆ! ಇದೇನು ತಮಾಷೆ ಎಂದುಕೊಳ್ಳಬೇಡಿ. ನಿಜವಾಗಿಯೂ ಗರ್ಭಿಣಿ ಎಂದು ತೋರಿಸುತ್ತಿದೆ. ವ್ಯಕ್ತಿಯೊಬ್ಬರು ಒಂದು ಟೊಮೆಟೊ ತಂದು, ಅದನ್ನು ನಮ್ಮ ಎದುರೇ ಕಟ್‌ ಮಾಡಿದ್ದಾರೆ. ಬಳಿಕ, ಪ್ರೆಗ್ನೆನ್ಸಿ ಕಿಟ್‌ ನಮ್ಮ ಎದುರೇ ಪ್ಯಾಕ್‌ನಿಂದ ಹರಿದು ತೆಗೆದು ಅದನ್ನು ಕತ್ತರಿಸಿದ ಟೊಮೆಟೊದಲ್ಲಿ ಇಟ್ಟಿದ್ದಾರೆ. ಆದರೆ ಅದು ಒಂದೇ ಲೈನ್‌ ತೋರಿಸಿದೆ. ಹೀಗೆ ಯಾಕೆ ಮಾಡುತ್ತಿದ್ದಾರೆ ಎಂದು ಒಂದು ಕ್ಷಣ ತಿಳಿಯುವುದೇ ಇಲ್ಲ. ಆದರೆ, ಅಲ್ಲೇ ಇರೋದು ಟ್ವಿಸ್ಸ್‌.

ಅದೇನೆಂದರೆ, ಅದೇ ಇನ್ನೊಂದು ಟೊಮೆಟೊದಲ್ಲಿ ಇನ್ನೊಂದು ಪ್ರೆಗ್ನಿನ್ಸಿ ಕಿಟ್‌ ಇಟ್ಟಾಗ ಅದು ಗರ್ಭಿಣಿಯಾದಂತೆ ಎರಡು ಗೆರೆ ತೋರಿಸಿದೆ. ಇದೇ ರೀತಿ ಹಲವರು ಮಾಡಿರುವ ವಿಡಿಯೋ ಕೂಡ ನೋಡಬಹುದು. ಇದಕ್ಕೆ ವೈಜ್ಞಾನಿಕ ಕಾರಣ ಏನೋ ಇರುತ್ತದೆ. ಆದರೆ ಸದ್ಯ ಇದು ತಮಾಷೆಯ ವಿಷಯವಾಗಿದೆ.

ಟೊಮೆಟೊದಲ್ಲಿ ಗಂಡು- ಹೆಣ್ಣು ಇದ್ದರೆ ಹೀಗಾಗುತ್ತಿರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಗರ್ಭಿಣಿಯನ್ನು ಕೊಂದ ಪಾಪ ನಿಮ್ಮ ತಲೆಗೆ ಸುತ್ತಿಕೊಳ್ಳುತ್ತದೆ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಅಲ್ಲದೆ ಇದನ್ನು ನೋಡುತ್ತಿದ್ದಂತೆಯೇ ನಾನು ಫ್ರಿಜ್‌ ಬಳಿ ಓಡಿ ಹೋಗಿ ನಮ್ಮ ಮನೆಯಲ್ಲಿ ಇದ್ದ ಟೊಮೆಟೊ ಕಟ್‌ ಮಾಡಿ ನೋಡಿದೆ, ಆದರೆ ಒಂದೇ ಲೈನ್‌ ಬಂತು ಎಂದು ಒಬ್ಬಾಕೆ ಕಮೆಂಟ್‌ ಮಾಡಿದ್ದು, ಹಾಗಿದ್ರೆ ನಾನೂ ಹೋಗಿ ನೋಡ್ತೇನೆ ಎಂದು ಅದಕ್ಕೆ ಮತ್ತೊಬ್ಬಾಕೆ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.