Home ದಕ್ಷಿಣ ಕನ್ನಡ Putturu : ರೈಲ್ವೇ ನಿಲ್ದಾಣದಲ್ಲಿ ಶೀಟ್ ಬಿದ್ದು ಇಬ್ಬರು ಮಹಿಳಾ ಪ್ರಯಾಣಿಕರಿಗೆ ಗಾಯ!!

Putturu : ರೈಲ್ವೇ ನಿಲ್ದಾಣದಲ್ಲಿ ಶೀಟ್ ಬಿದ್ದು ಇಬ್ಬರು ಮಹಿಳಾ ಪ್ರಯಾಣಿಕರಿಗೆ ಗಾಯ!!

Hindu neighbor gifts plot of land

Hindu neighbour gifts land to Muslim journalist

Putturu : ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಒಂದು ಅವಘಡ ನಡೆದಿದ್ದು ನಿಲ್ದಾಣದ ಮಾಡಿನಿಂದ ಶೀಟ್ ಬಿದ್ದು ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

ರೈಲ್ವೇ ನಿಲ್ದಾಣದಲ್ಲಿ ನವೀಕರಣ ಕೆಲಸ ನಡೆಯುತ್ತಿದ್ದು, ಶೀಟು ಅಳವಡಿಕೆ ಕಾರ್ಯ ಸಾಗುತ್ತಿತ್ತು. ಪ್ರಯಾಣಿಕರ ಆಸನದ ಮೇಲ್ಭಾಗದಲ್ಲಿ ಎರಡು ಸಿಮೆಂಟ್‌ ಶೀಟಿನ ನಡುವೆ ಇರಿಸಲಾಗಿದ್ದ ತಗಡು ಶೀಟು ಗಾಳಿಗೆ ಹಾರಿ ಮಂಗಳೂರಿಗೆ ತೆರಳಲು ನಿಲ್ದಾಣದಲ್ಲಿ ಕುಳಿತುಕೊಂಡಿದ್ದ ಇಬ್ಬರು ಮಹಿಳಾ ಪ್ರಯಾಣಿಕರ ಮೇಲೆ ಬಿದ್ದಿದೆ.

ತತ್‌ಕ್ಷಣ ಇಬ್ಬರನ್ನೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಪ್ರಯಾಣಿಕೆಯ ಕೈಗೆ ಹೆಚ್ಚಿನ ಗಾಯ ಉಂಟಾಗಿದೆ. ಗಾಯಾಳುಗಳಿಗೆ ರೈಲ್ವೇ ಇಲಾಖೆಯಿಂದಲೇ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದೆ.