Madikeri: ಚಲಿಸುತ್ತಿರುವಾಗಲೇ ಸುಟ್ಟು ಕರಕಲಾಗಿರುವ ಕಾರು! ಪ್ರಯಾಣಿಕರಿಬ್ಬರು ಪಾರು!

Share the Article

 

Madikeri: ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಪರಿಣಾಮ ಸುಟ್ಟು ಭಸ್ಮ ಆಗಿರುವ ಘಟನೆ ಇಂದು ಮಧ್ಯಾಹ್ನ 2.10 ರ ಸಮಯದಲ್ಲಿ ಮಡಿಕೇರಿ- ಸುಂಟಿಕೊಪ್ಪ ಮಾರ್ಗಮಧ್ಯದ ಸಿಂಕೋನ ಬಳಿ ನಡೆದಿದೆ.

ಮಡಿಕೇರಿಯಿಂದ (madikeri) ಸುಂಟಿಕೊಪ್ಪ ಕಡೆಗೆ ಬರುತ್ತಿದ್ದ ಡಸ್ಟರ್ ಕಾರಿನ ಟಯರ್ ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಅದರಲ್ಲಿದ್ದ ಇಬ್ಬರು ಕಾರನ್ನು ನಿಲ್ಲಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅಗ್ನಿಯ ಕೆನ್ನಾಲಿಗೆ ತೀವ್ರವಾಗಿ ವ್ಯಾಪಿಸಿಕೊಂಡು ಕಾರನ್ನು ಸುಟ್ಟು ಹಾಕಿದೆ.

 

Comments are closed.