Bagalakote: ಮದುವೆಯಾಗಲು ಬಂದ ಪ್ರೇಮಿಗಳಿಗೆ ಹಲ್ಲೆ!

Bagalakote: ಮದುವೆಯಾಗಲೆಂದು ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಬಂದಿದ್ದ ಪ್ರೇಮಿಗಳ ಮೇಲೆ ಯುವತಿ ಕಡೆಯವರು ದಾಳಿ ನಡೆಸಿ ಯುವತಿಯನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಶುಕ್ರವಾರ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.

ಗಾಣಿಗ ಸಮುದಾಯದ ಲಕ್ಷ್ಮೀ, ಮರಾಠಾ ಸಮುದಾಯದ ಅಪ್ಪಾಜಿ ಅಂತರ್ಜಾತಿ ವಿವಾಹಕ್ಕೆ ಬೆಳಿಗ್ಗೆ ರಿಜಿಸ್ಟರ್‌ ಮದುವೆ ಮಾಡಿಕೊಳ್ಳಲು ಜಮಖಂಡಿಯ ಸಬ್‌ರಿಜಿಸ್ಟ್ರಾರ್‌ ಕಚೇರಿಗೆ ಬಂದಿದ್ದರು. ವಿಷಯ ತಿಳಿದ ಯುವತಿ ಮನೆ ಕಡೆಯ ಪೋಷಕರು ಯುವತಿಗೆ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ. ಮೂರ್ಛೆ ಹೋದರೂ ಬಿಡದೆ ಹುಡುಗಿಯ ಮನೆಯವರು ಯುವತಿಗೆ ನೀರು ಕುಡಿಸಿ ಮನೆಗೆ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ.

ಇದೆಲ್ಲದರ ಮಧ್ಯೆ ಬಾಯಿಂದ ರಕ್ತ ಸುರಿಯುತ್ತಿದ್ದರೂ ಪ್ರಿಯಕರನತ್ತ ಕೈ ಸನ್ನೆ ಮಾಡುತ್ತಿದ್ದಿರುವುದು ಕಂಡು ಬಂದಿದೆ. ಹಲ್ಲೆಗೆ ಒಳಗಾಗಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಿಯಕರ ಜಮಖಂಡಿ ಪೊಲೀಸ್‌ ಠಾಣೆಯಲ್ಲಿ ಇದ್ದಾನೆ.

Comments are closed.