Udupi: ಮಣಿಪಾಲ: ಪೂರ್ಣಿಮ ಶೆಟ್ಟಿ ಅವರಿಗೆ ಪಿಎಚ್‌.ಡಿ. ಪದವಿ!

Share the Article

Udupi: ಮಣಿಪಾಲ ಅಕಾಡೆಮಿ ಆಫ್ಹೈಯ‌ರ್ ಎಜುಕೇಶನ್ ಆಡಳಿತಗೊಳಪಟ್ಟ ಡೈರಕ್ಟರೇಟ್ ಆಫ್ ಆನ್ ಲೈನ್ ಎಜುಕೇಶನ್‌ನ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪೂರ್ಣಿಮ ಶೆಟ್ಟಿ ಅವರ ‘ರಿಯಲ್ ಟೈಮ್ ಸೆಂಟಿಮೆಂಟ್ ಅನಾಲಿಸಿಸ್‌ ಆಫ್ ಸೋಶಿಯಲ್ ಮೀಡಿಯಾ ಡಾಟಾ ಯೂಸಿಂಗ್ ಎಮರ್ಜೆನ್ಸಿ ಟೆಕ್ನಿಕ್ಸ್’ ಎನ್ನುವ ವಿಷಯದ ಸಂಶೋಧನ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್‌.ಡಿ. ಪದವಿ ನೀಡಿದೆ.

ಪೂರ್ಣಿಮಾ ಶೆಟ್ಟಿಯವರು ಶ್ರೀನಿವಾಸ ಇನ್ಸಿಟ್ಯೂಟ್ ಆಫ್‌ ಟೆಕ್ನಾಲಜಿ, ವಳಚ್ಚಿಲ್‌, ಮಂಗಳೂರು ಇಲ್ಲಿನ ಎಮ್.ಸಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಶಶಿಧರ ಕಿಣಿ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

Comments are closed.