ಐಪಿಎಲ್‌ ಬೆಟ್ಟಿಂಗ್‌ ಪ್ರಮೋಷನ್ಸ್‌; ಇನ್‌ಫ್ಲುಯೆನ್ಸರ್ಸ್‌ಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದ ಸೈಬರ್‌ ಪೊಲೀಸರು!

Share the Article

IPL Betting Promotion: ಬೆಟ್ಟಿಂಗ್‌ ಪ್ರಮೋಷನ್‌ ಮಾಡುವ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಸೈಬರ್‌ ಕ್ರೈಮ್‌ ಬಿಸಿ ಮುಟ್ಟಿಸಿದ್ದಾರೆ. ನೋಟಿಸ್‌ ನೀಡಿ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಇದು ಇನ್ನೊಮ್ಮೆ ಮರುಕಳಿಸಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ವಾರ್ನಿಂಗ್‌ ನೀಡಿದ್ದಾರೆ.

ವರುಣ್‌ ಆರಾಧ್ಯ, ಸೋನು ಗೌಡ, ಶಿಲ್ಪಾ ಗೌಡ, ದೀಪಕ್‌ ಗೌಡ ಸೇರಿ 40 ಕ್ಕೂ ಹೆಚ್ಚು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗೆ ಸೈಬರ್‌ ಕ್ರೈಂ ಪೊಲೀಸರಿಂದ ವಾರ್ನಿಂಗ್‌ ದೊರಕಿದೆ. ಇವರ ಇನ್‌ಸ್ಟಾ ಸ್ಟೋರಿಯಲ್ಲಿ ಬೆಟ್ಟಿಂಗ್‌ ಪ್ರಮೋಷನ್‌ ಮಾಡುತ್ತಿದ್ದರು. ಯಾವ ಟೀಂ ಗೆಲ್ಲುತ್ತೆ, ಸೋಲುತ್ತೆ ಎನ್ನುವ ಮಾಹಿತಿ ತಿಳಿಸೋ ವಾಟ್ಸಪ್‌ ಗ್ರೂಪ್‌ಗಳ ಲಿಂಕ್‌ ಹಾಕಿ ಅದಕ್ಕೆ ಜಾಯಿನ್‌ ಆಗುವಂತೆ ತಮ್ಮ ತಮ್ಮ ಫಾಲೋವರ್ಸ್‌ಗೆ ಹೇಳಿತ್ತಿದ್ದರು. ಬೆಟ್ಟಿಂಗ್‌ ಬುಕ್ಕಿಗಳು ನೀಡೋ ಡಿಟೇಲ್ಸ್‌ ಮೇರೆಗೆ ಈ ಸ್ಟೋರಿ ಹಾಕುತ್ತಿದ್ದರು.

ಇನ್‌ಸ್ಟಾ ಸ್ಟೋರಿ ನೋಡಿ ಇವರುಗಳನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. 20 ಕ್ಕೂ ಹೆಚ್ಚು ಜನ ರೀಲ್ಸ್‌ ಇನ್‌ಫ್ಲುಯೆನ್ಸರ್‌ಗಳ ವಿಚಾರಣೆ ನಡೆದಿದೆ ಎನ್ನಲಾಗಿದ್ದು, ಬೆಂಗಳೂರಿನವರು ಮಾತ್ರವಲ್ಲದೇ, ಮಂಗಳೂರು, ಮಂಡ್ಯ, ಹುಬ್ಬಳ್ಳಿ, ಎಲ್ಲಾ ಜಿಲ್ಲೆಗಳ ಇನ್‌ಫ್ಲುಯೆನ್ಸರ್‌ಗಳನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಹಾಗೂ ಇವರಿಗೆಲ್ಲ ಖಡಕ್‌ ವಾರ್ನಿಂಗ್‌ ನೀಡಿ ಕಳುಹಿಸಲಾಗಿದೆ.

Comments are closed.