Patna: ಬಿಜೆಪಿ ನಾಯಕನ ಪುತ್ರಿ ಮೇಲೆ ಆಸಿಡ್‌ ದಾಳಿ!

Patna: ಬಿಹಾರದ ಬಿಜೆಪಿ ನಾಯಕರೊಬ್ಬರ ಪುತ್ರಿ ಮೇಲೆ ಆಸಿಡ್‌ ದಾಳಿ ನಡೆದಿರುವ ಘಟನೆ ನಡೆದಿದೆ. 24 ವರ್ಷದ ಯುವತಿ ತನ್ನ ಮನೆಯಲ್ಲಿ ಮಲಗಿರುವಾಗ ಆಕೆಯ ಮೇಲೆ ಆಸಿಡ್‌ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಬಕ್ರಿಯಲ್ಲಿರುವ ಭಾರತೀಯ ಜನತಾ ಪಕ್ಷದ ಮಾಜಿ ಉಪಾಧ್ಯಕ್ಷ ಸಂಜಯ್‌ ಕುಮಾರ್‌ ಸಿಂಗ್‌ ಅವರ ಪುತ್ರಿ ಪಲ್ಲವಿ ರಾಥೋಡ್‌ ಮೇಲೆ ದಾಳಿ ನಡೆದಿದೆ.

ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಮನೆಯ ಗೋಡೆಯನ್ನು ಹಾರಿ ಕಿಟಕಿಯ ಮೂಲಕ ಆಸಿಡ್‌ ಎಸೆದಿದ್ದಾರೆ. ದಾಳಿಯಲ್ಲಿ ಸಂತ್ರಸ್ತೆಯ ಮುಖ ಮತ್ತು ದೇಹವು ತೀವ್ರ ಸುಟ್ಟ ಗಾಯಗಳಾಗಿದೆ. ದಾಳಿಯ ಉದ್ದೇಶ ಇನ್ನೂ ತಿಳಿದು ಬಂದಿಲ್ಲ. ಆಕೆಯ ತಂದೆ ಬಿಹಾರ ಪೊಲೀಸರಿಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಲಿಖಿತ ದೂರು ನೀಡಿದ್ದಾರೆ.

Comments are closed.