Kerala: 10ನೇ ಕ್ಲಾಸ್ ಬಾಲಕಿ 8 ತಿಂಗಳ ಗರ್ಭಿಣಿ: ಪಕ್ಕದ ಮನೆಯ 55 ವರ್ಷದ ವ್ಯಕ್ತಿಯ ಬಂಧನ

Share the Article

Kerala: 10ನೇ ತರಗತಿ ವಿದ್ಯಾರ್ಥಿನಿಯೋರ್ವಳು 8 ತಿಂಗಳ ಗರ್ಭಿಣಿಯಾಗಿರುವ ಪ್ರಕರಣವೊಂದು ಕೇರಳದಿಂದ (Kerala) ವರದಿಯಾಗಿದೆ. ಎರ್ನಾಕುಲಂ ಚೆಂಬರಕ್ಕಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನು ಬಲತ್ಕಾರ ಮಾಡಿ ಗರ್ಭಿಣಿಯನ್ನಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದ ನೆರೆಮನೆಯ 55 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬಾಲಕಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ವೈದ್ಯರು ತಪಾಸಣೆ ನಡೆಸಿದ ವೇಳೆ ಆಕೆ ಗರ್ಭವತಿಯಾಗಿರುವುದು ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕಿಯ ಪಕ್ಕದ ಮನೆಯವನೇ ಆದ 55 ವರ್ಷದ ತಮಿಳುನಾಡು ಮೂಲದ ರಾಜನ್‌

ಎಂಬವನನ್ನು ತಡಿಯಿಟ್ಟಪರಂಬು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನವಾಗಿದೆ.

Comments are closed.