Putturu: ಎರಡು ತಂಡಗಳ ನಡುವೆ ಗಲಾಟೆ; ಹಲ್ಲೆ, ಇಬ್ಬರಿಗೆ ಗಾಯ!

Share the Article

Putturu: ಎರಡು ತಂಡಗಳ ನಡುವೆ ಗಲಾಟೆ ನಡೆದು, ವಿಕೋಪಕ್ಕೆ ಹೋಗಿ ಇಬ್ಬರ ಮೇಲೆ ಮಾರಕಾಯುಧದಿಂದ ಹಲ್ಲೆ ನಡೆದ ಘಟನೆ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಎಂಬಲ್ಲಿ ಮಾ.27 ರ ಸಂಜೆ ನಡೆದಿರುವ ಕುರಿತು ವರದಿಯಾಗಿದೆ. ಪುತ್ತೂರು

ಈಶ್ವರಮಂಗಲ ಮೂಲದ ದೀಕ್ಷಿತ್‌ ರೈ ಕುತ್ಯಾಳ, ಸ್ವಸ್ತಿಕ್‌ ಎಂಬುವವರಿಗೆ ಗಾಯವಾಗಿದೆ ಎನ್ನಲಾಗಿದೆ.

ಹಣಕಾಸಿನ ವಿಚಾರಕ್ಕೆ ಸಂಬಂಧಪಟ್ಟಂತೆ, ಸಾಮಾಜಿಕ ಜಾಲತಾಣದಲ್ಲಿ ಫೊಟೋ ವೈರಲ್‌ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.

ಈ ಎರಡೂ ತಂಡಗಳು ಮೊದಲಿಗೆ ಸ್ನೇಹಿತರಾಗಿದ್ದವರು ಎನ್ನಲಾಗಿದ್ದು, ನಂತರ ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು ಎನ್ನಲಾಗಿದೆ.

ಪೇಟೆಯ ದರ್ಬೆ ಸಮೀಪದ ಹೋಟೆಲ್‌ನಲ್ಲಿ ಪ್ರಾರಂಭವಾಗಿದೆ ಜಗಳ. ಮಾಹಿತಿ ಆಧರಿಸಿ ನಗರ ಠಾಣೆಯ ಪೊಲೀಸರು ಇತ್ತಂಡವನ್ನು ಸಮಾಧಾನಪಡಿಸಿ ಕಳುಹಿಸಿರುವ ಕುರಿತು ವರದಿಯಾಗಿದೆ. ಇದಾದ ನಂತರ ಕೆಲ ಹೊತ್ತಲ್ಲಿ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ಇತ್ತಂಡ ಕಾದಾಡಿದೆ.

Comments are closed.