Death: ಶಿರಸಿ: ಅಡಿಕೆ ಸುಲಿಯುವ ಯಂತ್ರಕ್ಕೆ ಸೀರೆ ಸಿಲುಕಿ ದಾರುಣ ಅಂತ್ಯ ಕಂಡ ಮಹಿಳೆ!!

Share the Article

Death: ಅಡಿಕೆ ಸುಳಿಯುವ ಮಿಷಿನ್ ಗೆ ಸಿಲುಕಿ ಮಹಿಳೆಯೋರ್ವಳು ದಾರುಣವಾಗಿ ಸಾವನ್ನಪ್ಪಿದ (Death)ಘಟನೆ ಉತ್ತರಕನ್ನಡದ ಶಿರಸಿಯಲ್ಲಿ ನಡೆದಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಪತ್ನಿ ಶೋಭಾ ಹೊಸಬಾಳೆ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮನೆಯಲ್ಲಿ ಅಡಿಕೆ ತೆಗೆಯುವ ಕೆಲಸ ಮಾಡಲು ಇತರ ಕೆಲಸದವರನ್ನೂ ನೇಮಕ ಮಾಡಿಕೊಂಡಿದ್ದರು. ಈ ಸಂದರ್ಭ ಅವರ ಕೆಲಸವನ್ನು ಗಮನಿಸಲು ಶೋಭಾ ಹೋಗಿದ್ದಾರೆ.

ಆಗ ಅವರ ಸೀರೆ ಅಡಿಕೆ ಸುಳಿಯುವ ಮಿಷಿನ್ ಗೆ ಸಿಲುಕಿಕೊಂಡಿದ್ದು ದಿಢೀರನೆ ಯಂತ್ರ ಅವರನ್ನು ಎತ್ತಿ ಬಿಸಾಡಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರ ರಕ್ತಸ್ರಾವವಾಗಿ ಬಳಿಕ ಅವರು ಮೃತಪಟ್ಟಿದ್ದಾರೆ.

Comments are closed.