of your HTML document.

Shirsi: ಸ್ಟೀಲ್ ತಟ್ಟೆ ಯಲ್ಲಿ ಮೂಡಿದ ಮದುವೆ ಆಮಂತ್ರಣ!!

Shirsi: ಇಂದು ಮದುವೆ ಆಮಂತ್ರಣ ಪತ್ರಿಕೆಗಳು ಟ್ರೆಂಡ್ ಆಗಿ ಬಿಟ್ಟಿವೆ. ಕಾಲ ಕಳೆದಂತೆ ಹೊಸ ಹೊಸ ನಮೂನೆಯಲ್ಲಿ ಮದುವೆ ಆಮಂತ್ರಣಗಳನ್ನು ಪ್ರಿಂಟ್ ಹಾಕಿಸುವುದು ಕಾಣುತ್ತೇವೆ. ಇದೀಗ ಇನ್ನೊಂದು ಜೋಡಿ ವಿಶೇಷ ಎಂಬಂತೆ ಸ್ಟೀಲ್ ತಟ್ಟೆಯಲ್ಲಿ ತಮ್ಮ ಆಮಂತ್ರಣ ಪತ್ರಿಕೆಯನ್ನು ಪ್ರಿಂಟ್ ಮಾಡಿಸಿದ್ದಾರೆ.

ಹೌದು, ಶಿರಸಿ(Shirsi) ತಾಲೂಕಿನ ಹೊನ್ನೆಗದ್ದೆಯ ಮಹಾಲಕ್ಷ್ಮೀ ಸತ್ಯನಾರಾಯಣ ಹೆಗಡೆ ಇವರ ಮಗ ಖ್ಯಾತ ಪಶುವೈದ್ಯ ಪರಮೇಶ್ವರ ಎಸ್.ಹೆಗಡೆ (ಡಾ. ಪಿ.ಎಸ್‌.ಹೆಗಡೆ) ಇವರ ಮಗಳ ಮದುವೆಯ ಆಮಂತ್ರಣ ಆಕರ್ಷಣೀಯವಾಗಿದೆ. ವಿಭಿನ್ನ ರೀತಿಯಲ್ಲಿ ಮದುವೆಯ ಆಮಂತ್ರಣವಿರಬೇಕು ಎಂದು ಮನೆಯವರು ಯೋಚಿಸುವಾಗ ಈ ಐಡಿಯಾ ನಮಗೆ ಹೊಳೆದಿದ್ದು ಮನೆಯಲ್ಲಿ ಸಾಮಾನ್ಯವಾಗಿ ಊಟಕ್ಕೆ ಬಳಸುವ ಸ್ಟೀಲ್ ಬಟ್ಟಲಿನ ಹಿಂಭಾಗದಲ್ಲಿ ಡಿಜಿಟಲ್ ಪ್ರಿಂಟ್ ಮೂಲಕ ತಮ್ಮ ಮಗಳ ಮದುವೆಯ ಕರೆಯೋಲೆಯನ್ನು ಮುದ್ರಿಸಿ ಮದುವೆಗೆ ಆಮಂತ್ರಿಸಿದ್ದಾರೆ.

Comments are closed.