Gold: ದೇಶದ ಈ ರಾಜ್ಯದಲ್ಲಿ ಏಳು ಕಡೆ ಚಿನ್ನದ ನಿಕ್ಷೇಪ ಪತ್ತೆ!!

Gold: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಜಿಗಿತ ಕಾಣುತ್ತಿದೆ. ಜೊತೆಗೆ ಕೊಳ್ಳುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ನಡುವೆಯೇ ದೇಶದ ಈ ರಾಜ್ಯದಲ್ಲಿ ಏಳು ಕಡೆ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.

ಹೌದು, ಜಗತ್ತಿನಲ್ಲಿ ಗೋಲ್ಡ್ ಗೆ ಡಿಮ್ಯಾಂಡ್ ಹೆಚ್ಚಾಗಿರೋ ಟೈಂ ನಲ್ಲಿ ಭಾರತಕ್ಕೆ ಬಂಪರ್ ಲಾಟರಿ ಹೊಡೆದಿದೆ. ಒಡಿಶಾದಲ್ಲಿ ಅಪಾರ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಕೇವಲ ಒಂದು ಕಡೆ ಮಾತ್ರವಲ್ಲದೇ ಒಡಿಶಾದ 7 ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
ಇದುವರೆಗೂ ಕರ್ನಾಟಕದ ಹಟ್ಟಿ ಗಣಿಯಲ್ಲಿ ಮಾತ್ರ ಚಿನ್ನ ಉತ್ಪಾದನೆಯಾಗುತ್ತಿದ್ದು ಒಡಿಶಾದ ಜಾಶಿಪುರ್, ಸುರಿಯಾಗುಡಾ, ರೌನ್ಸಿ, ಇಡೆಲ್ಕುಚಾ, ಮರೆದಿಹಿ, ಸುಲೆಪಾತ್, ಬಾದಂಪಹರ್ನಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಚಿನ್ನದ ನಿಕ್ಷೇಪಗಳನ್ನ ಪತ್ತೆ ಹಚ್ಚಿದೆ. ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಒಟ್ಟು ರಾಜ್ಯ ಏಳು ಕಡೆ ಚಿನ್ನದ ನಿಕ್ಷೇಪವನ್ನ ಪತ್ತೆ ಹಚ್ಚಿದೆ.
Comments are closed.