of your HTML document.

Bangalore : ಇಟ್ಟಿಗೆ ಪಾಲಿಶ್‌ ಹಾಕಿ ನಕಲಿ ಚಿನ್ನ ಮಾರಾಟಕ್ಕೆ ಯತ್ನ- ಮೂವರು ಅರೆಸ್ಟ್‌!

Banglore: ಇಟ್ಟಿಗೆಗೆ ಚಿನ್ನದ ಪಾಲಿಶ್‌ ಮಾಡಿ ಮಾರಾಟಕ್ಕೆ ಯತ್ನ ಮಾಡಿದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.

ರಬಿಕುಲ್‌ ಇಸ್ಲಾಂ, ಇದೀಶ್‌ ಅಲಿ, ಅನ್ವರ್‌ ಹುಸೇನ್‌ ಬಂಧಿತ ಆರೋಪಿಗಳು.

ಮನೆಗೆ ಪಾಯ ಹಾಕುವ ಸಂದರ್ಭದಲ್ಲಿ ಚಿನ್ನದ ನಿಧಿ ಸಿಕ್ಕಿದೆ ಎಂದು ಆರೋಪಿಗಳು ಹೇಳಿದ್ದು, ಚಿನ್ನದ ಬೆಲೆಗಿಂತ ಅರ್ಧ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ನಂಬಿಕೆ ಹುಟ್ಟಿಸಿದ್ದರು.

ಮರದ ಹಲಗೆ ಹಾಗೂ ಇಟ್ಟಿಗೆಗೆ ಚಿನ್ನದ ಪಾಲಿಶ್‌ ಮಾಡಿದ ಖದೀಮರು ನಂಬಿಕೆ ಬರಲು ಮೊದಲು ಒಂದೆರಡು ಗ್ರಾಂ ಅಸಲಿ ಚಿನ್ನ ನೀಡಿದ್ದರು. ಅನಂತರ ನಕಲಿ ಚಿನ್ನ ಮಾರಾಟಕ್ಕೆ ಯತ್ನ ಮಾಡಿದ್ದರು. ಚಿನ್ನ ತೆಗೆದುಕೊಳ್ಳಿ ಎಂದು ಪದೇ ಪದೇ ಹೇಳಿ ಲೊಕೇಶನ್‌ ಚೇಂಜ್‌ ಮಾಡುತ್ತಿದ್ದರು.

ಸೂಕ್ತ ಮಾಹಿತಿಯ ಮೇರೆಗೆ ಕೋರಮಂಗಲದಲ್ಲಿ ದಾಳಿ ಮಾಡಿ ಮೂವರನ್ನು ಬಂಧನ ಮಾಡಲಾಗಿದೆ. ಪೊಲೀಸರು ಬಂಧಿತರ ವಿಚಾರಣೆ ಮಾಡಿದ್ದಾರೆ.

Comments are closed.